tamanvi
ಕೃಷಿ

ಜನರ ಬೇಡಿಕೆ ಮನ್ನಿಸಿ ನಾಟಿ ಕೋಳಿ ವಿತರಣೆ: ಶಾಸಕ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಇಷ್ಟು ವರ್ಷ ಪಶು ಸಂಗೋಪನಾ ಇಲಾಖೆಯಿಂದ ಗಿರಿರಾಜ ಕೋಳಿ ಮರಿಗಳನ್ನು ನೀಡಲಾಗುತ್ತಿತ್ತು ಆದರೆ ಈ ಬಾರಿ ಜಿಲ್ಲೆಯ ಜನರ ಬೇಡಿಕೆಯಂತೆ ನಾಟಿ ಕೋಳಿ‌ಮರಿಗಳನ್ನು ವಿತರಣೆ ಮಾಡುತ್ತಿದ್ದೇವೆ,ಮಹಿಳೆಯರ ಸ್ವ ಉದ್ಯೋಗಕ್ಕೂ ಇದು ಪ್ರೇರಣೆಯಾಗಲಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಅವರು ಪಶು ಸಂಗೋಪನಾ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಅರ್ಹ 46 ಮಹಿಖೆಯರಿಗೆ 5 ವಾರದ ಕೋಳಿ ಮರಿಗಳನ್ನು ವಿತರಿಸಲಾಗಿದೆ.

ಪ.ಪಂಗಡದ 40 ,ಸಾಮಾನ್ಯ 4 ಹಾಗೂ ಪಜಾತಿ ಕುಟುಂಬದ ಒಟ್ಟು 46 ಮಂದಿಗೆ ಮರಿಗಳನ್ನು ವಿತರಣೆ ಮಾಡಲಾಯಿತು.

ನಾಟಿ ಕೋಳಿಗೆ ಉತ್ತಮ ಬೇಡಿಕೆ ಇದ್ದು ಮಹಿಳೆಯರು ಮನೆಯಲ್ಲಿ‌ನಾಟಿ ಕೋಳಿಗಳನ್ನು ಸಾಕುವ ಮೂಲಕ ಸ್ವ ಉದ್ಯೋಗವನ್ನು ಮಾಡಿ ಉತ್ತಮ ಲಾಭವನ್ನು ಗಳಿಸಬಹುದು ಎಂದು ಹೇಳಿದ ಶಾಸಕರು ಸರಕಾರ ಉಚಿತ ಗ್ಯಾರಂಟಿ ಯೋಜನೆಯ ಜೊತೆಗೆ ಇನ್ನಿತರ ಉಚಿತ ಸ್ವಾವಲಂಬಿ ಯೋಜನೆಗಳನ್ನು ಜಾರಿಗೆ ತಂದು ಬಡವರ ಅಭಿವೃದ್ದಿಗೆ ಒಣ ತೊಟ್ಟಿದೆ ಎಂದು ಶಾಸಕರು ಹೇಳಿದರು.

ತಾಲೂಕು ಪಶು ವೈದ್ಯಾಧಿಕಾರಿ ಡಾ. ಧರ್ಮಪಾಲ ಅವರು ಸ್ವಾಗತಿಸಿ ಸರಕಾರದಿಂದ ಸಿಗುವ ಇತರೆ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts

ಅಡಿಕೆ ಸಾರದಲ್ಲಿದೆ ಕ್ಯಾನ್ಸರ್ ಪ್ರತಿಬಂಧಕ ಗುಣ | ಯೆನೆಪೋಯ ವಿವಿ ವೈಜ್ಞಾನಿಕ ಸಂಶೋಧನೆಗೆ ಕ್ಯಾಂಪ್ಕೋ ಅಭಿನಂದನೆ

ಮಂಗಳೂರು: ಒಂದೆಡೆ ಅಡಿಕೆ ಕ್ಯಾನ್ಸರ್ ಕಾರಕ ಎನ್ನುವ ಚರ್ಚೆ ನಡೆಯುತ್ತಿದ್ದರೆ, ಇದೆಲ್ಲಾ…

ರಬ್ಬರ್ ಮೌಲ್ಯವರ್ಧನೆಗಾಗಿ ಸ್ಥಳೀಯ ಕೈಗಾರಿಕೆ | ರಾಜ್ಯ ರಬ್ಬರ್ ಬೆಳೆಗಾರರ ಸಮ್ಮೇಳನದಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ

ಬೆಳ್ತಂಗಡಿ: ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಅಧ್ಯಯನ ಮಾಡಿಕೊಂಡು ರಬ್ಬರ್ ಮಂಡಳಿ…