ಪುತ್ತೂರು: ಮೊಬೈಲ್ ಕರೆ ಹೋಗ್ತಿಲ್ಲ. ಇಂಟರ್ ನೆಟ್ ವರ್ಕ್ ಆಗ್ತಿಲ್ಲ. ಹೀಗೇಕಾಯ್ತು ಎಂಬ ಪ್ರಶ್ನೆ ಪ್ರತಿಯೊಬ್ಬರದ್ದು. ಕಾರಣ ಡಿಸೆಂಬರ್ 31.
ವರ್ಷಾಂತ್ಯದ ದಿನವಾದ ಮಂಗಳವಾರ ಮೊಬೈಲ್ ನೆಟ್ ವರ್ಕ್ ಕಂಪೆನಿಗಳು ಬೆಳಗ್ಗಿನಿಂದಲೇ ಇಂಟರ್ ನೆಟ್ ಗೆ ಕತ್ತರಿ ಹಾಕಿದೆ.
ಹಿಂದಿನ ವರ್ಷ ವರ್ಷದ ಕೊನೆ ದಿನದಂದು ಅಹಿತಕರ ಘಟನೆಗಳು ವರದಿಯಾಗಿತ್ತು. ಈ ಕಾರಣದಿಂದ ಕಂಪೆನಿಗಳು ಇಂತಹ ನಿರ್ಧಾರಕ್ಕೆ ಬಂದಿರಬೇಕು ಎಂಬ ವಿಶ್ಲೇಷಣೆ ಕೇಳಿಬರುತ್ತಿವೆ.






















