ಮುಂಬೈನಲ್ಲಿ ಏರ್ಪಡಿಸಿದ್ದ ಒಂದು ಎಕ್ಸಿಬಿಷನ್’ನಲ್ಲಿ ರೂಪಾಯಿ ಹಿಂದಿನ ಇತಿಹಾಸಕ್ಕೆ ಬೆಳಕು ಚೆಲ್ಲಲಾಗಿದೆ. ರೂಪಾಯಿ ಹೆಸರು ಹೇಗೆ ಹುಟ್ಟಿಕೊಂಡಿತು ಎಂಬ ಹಲವರ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿದೆ.
ರೂಪಾಯಿಗೆ 2500 ವರ್ಷಗಳ ಕಥೆ ಇದೆ ಎಂಬ ಸತ್ಯವೂ ಹೊರಬಿದ್ದಿದೆ. 1538ರಲ್ಲಿ ಮೊಘಲ್ ದೊರೆ ಹುಮಾಯೂನ್’ನನ್ನು ಸೋಲಿಸಿ ಅಧಿಕಾರ ಹಿಡಿದಿತಾನೇ ಶೇರ್ ಶಾ ಸೂರಿ. ದೇಶದಲ್ಲಿ ಆಗ ದುಡ್ಡಿನ ಚಲಾವಣೆ ಇತ್ತಾದರೂ, ವ್ಯವಸ್ಥಿತವಾಗಿ ಇರಲಿಲ್ಲ. ಆದ್ದರಿಂದ ಆಗ ಇದ್ದ ಕೆಲ ಗೊಂದಲಗಳಿಗೆ ತೆರೆ ಎಳೆಯಲು ಶೇರ್ ಶಾ ಬೆಳ್ಳಿ ನಾಣ್ಯವನ್ನು ಪರಿಚಯಿಸಿದ. ಸಂಸ್ಕೃತದಲ್ಲಿ ಬೆಳ್ಳಿ ನಾಣ್ಯಕ್ಕೆ ರೂಪ್ಯ ಅನ್ತಾರೆ. ಇದೇ ಮುಂದೆ ರೂಪಾಯಿ ಆಯಿತು.
ಶೇರ್ ಶಾನ ನಂತರ ಬಂದ ಮೊಘಲರು ಇದೇ ರೂಪಾಯಿನ ಮುಂದುವರಿಸಿದರು. ಆದ್ರೆ ಅವರವರಿಗೆ ಬೇಕಾದ ಹಾಗೆ ವಿನ್ಯಾಸ ಮಾಡ್ಕೊಂಡ್ರು. ಪ್ರತಿಯೊಬ್ಬ ರಾಜನೂ ತನ್ನದೇ ಆದ ‘ಸಿಂಬಲ್’ ಹಾಕಿಸ್ಕೊಂಡ. ಉದಾಹರಣೆಗೆ ಸಿಖ್ ರಾಜರು ಅರಳಿ ಮರದ ಎಲೆ ಚಿತ್ರ ಹಾಕಿಸಿದ್ರೆ, ಅವಧ್ ನವಾಬರು ಮೀನಿನ ಚಿತ್ರ ಕೆತ್ತಿಸಿದ್ರು. ಬ್ರಿಟಿಷರು ಬಂದ್ಮೇಲೆ ಕೈಯಲ್ಲಿ ಮಾಡ್ತಿದ್ದ ಕಾಸುಗಳು ಹೋಗಿ ಮಷಿನ್ನಲ್ಲಿ ಮಾಡೋ ‘ಪರ್ಫೆಕ್ಟ್’ ನಾಣ್ಯಗಳು ಬರೋಕೆ ಶುರುವಾಯ್ತು.
ಎಕ್ಸಿಬಿಷನ್’ನಲ್ಲಿ ಕ್ರೇಜಿ ಕಲೆಕ್ಷನ್!
ಮುಂಬೈನಲ್ಲಿ ನಡೆಯುತ್ತಿರೋ ಎಕ್ಸಿಬಿಷನ್’ನಲ್ಲಿ ಪಾಲ್ ಅಬ್ರಹಾಂ ಅನ್ನುವವರ ಸಂಗ್ರಹದಲ್ಲಿ ಈ ಮಾಹಿತಿ ಹೊರಬಿದ್ದಿದೆಯಂತೆ. ಇಂಡಸ್ ಇಂಡ್ ಬ್ಯಾಂಕಿನ ಉದ್ಯೋಗಿಯಾಗಿದ್ದ ಇವರು, ಸಣ್ಣ ವಯಸ್ಸಲ್ಲೇ ನಾಣ್ಯ ಸಂಗ್ರಹದ ಗೀಳಿಗೆ ಬಿದ್ದುಬಿಟ್ಟರು. ಇಂದು ಅಪರೂಪದ ನಾಣ್ಯಗಳ ಭಂಡಾರವೇ ಅವರ ಬಳಿಯಿದೆಯಂತೆ.



























