ಪುತ್ತೂರಿನಲ್ಲೇ ತಯಾರಾದ ಪುತ್ತೂರಿನ ಬ್ರಾಂಡ್ ಆಗಿರುವ STVC (ಶಂಕರ್ಸ್ ಟಿವಿ ಕ್ಲಿನಿಕ್)ನಲ್ಲಿ ಟಿವಿ ಖರೀದಿಗೆ ಆಕರ್ಷಕ ಕೊಡುಗೆಯನ್ನು ಗ್ರಾಹಕರ ಮುಂದಿಡಲಾಗಿದೆ.
ಈಗಾಗಲೇ ಹಲವಾರು ಬ್ರ್ಯಾಂಡಿನ ಟಿವಿ ಮಾರುಕಟ್ಟೆಯಲ್ಲಿದೆ. ಆದರೆ ನಮ್ಮೂರಿನ ಬ್ರ್ಯಾಂಡ್’ನ ಟಿವಿ ಮಾರುಕಟ್ಟೆಯಲ್ಲಿದೆ ಎನ್ನುವುದು ನಿಮಗೆ ತಿಳಿದಿದೆಯೇ? ಇಲ್ಲ ಎಂದಾದರೆ ನಮ್ಮೂರಿನ ಟಿವಿ ಬ್ರ್ಯಾಂಡ್ ಬಗ್ಗೆ ಹಾಗೂ ನಮ್ಮೂರಿನ ನಮ್ಮವರಿಗಾಗಿ ನೀಡಿರುವ ವಿಶೇಷ ಆಫರನ್ನು ಗಮನಿಸಿ.
ಕೇವಲ 4444 ರೂ.ಗೆ ಎಲ್.ಇ.ಡಿ. ಟಿವಿಯನ್ನು ನಿಮ್ಮ ಮನೆಗೆ ಕೊಂಡೊಯ್ಯಬಹುದು. ಈ ಆಫರ್ ಕೆಲ ದಿನಗಳಷ್ಟೇ ನೀಡಲಾಗಿದೆ. ಈ ಟಿವಿಗಳಿಗೆ ಒಂದು ವರ್ಷದ ವ್ಯಾರೆಂಟಿ ಇದೆ.
ಇದರೊಂದಿಗೆ ಹಳೆ ಟಿವಿಗೆ ಬಾಯ್ ಬಾಯ್ ಹೇಳಿ ಹೊಸ ಟಿವಿಗೆ ಹಾಯ್ ಹಾಯ್ ಹೇಳುವ ಆಫರನ್ನು ಸಂಸ್ಥೆ ಗ್ರಾಹಕರಿಗಾಗಿ ತೆರೆದಿಟ್ಟಿದೆ. ನಿಮ್ಮ ಹಳೆಯ ಟಿವಿಯನ್ನು ಹೊಸ ಟಿವಿಯೊಂದಿಗೆ ಎಕ್ಸ್’ಚೇಂಜ್ ಮಾಡಿಕೊಳ್ಳುವ ಆಫರನ್ನು ನಿಮ್ಮ ಮುಂದಿಡಲಾಗಿದೆ. ಹಳೆ ಟಿವಿಗೆ ಉತ್ತಮ ದರವನ್ನು ನೀವು ಪಡೆದುಕೊಳ್ಳಲು ಅವಕಾಶವಿದೆ ಎಂದು ಸಂಸ್ಥೆಯ ಮಾಲಕರಾದ ಸತ್ಯಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂಬಿಕೆ, ನಿಖರತೆ, ನಾವೀನ್ಯತೆಗೆ ಹೆಸರಾಗಿರುವ STVC ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಪುತ್ತೂರಿನವರೇ ಆದ ಸತ್ಯಶಂಕರ್ ಭಟ್ ಅವರ ಪ್ರೌಢಿಮೆಗೆ ತಕ್ಕಂತೆ ಅವರ ಬುದ್ಧಿವಂತಿಕೆಯಿಂದ ರೂಪು ಪಡೆದ ಟಿವಿ ಇದು. ಟಿವಿ ಕ್ಷೇತ್ರದಲ್ಲಿ ದುಡಿದ 25 ವರ್ಷಗಳ ಶ್ರಮದ ಸಮೀಕರಣವೇ STVC. ಇದರಲ್ಲೇನು ವಿಶೇಷ ಎಂದು ಕೇಳುತ್ತೀರಾ, ನಮ್ಮೂರಿನ ಈ ಟಿವಿ ಬ್ರ್ಯಾಂಡಿನಲ್ಲಿ ಇದೆ ವಿಶೇಷ. ಯಾವುದೇ ಹೊಸ ಕಂಪೆನಿಯ ಟಿವಿ ಮಾರುಕಟ್ಟೆಗೆ ಬಂದಾಗ, ಅದರಲ್ಲಿ ಕರಾವಳಿ ಭಾಗಕ್ಕೆ ಸಂಭಂದಿಸಿದಂತೆ ಒಂದಲ್ಲ ಒಂದು ರೀತಿಯ ಸಮಸ್ಯೆ ಇದ್ದೇ ಇರುತ್ತದೆ. ಅದೇ ರೀತಿ ಉತ್ತಮ ಅಂಶಗಳು ಇರುತ್ತವೆ. ಹಲವು ಟಿವಿಗಳನ್ನು ಅಧ್ಯಯನ ಮಾಡಿ, ಅದರಲ್ಲಿ ಅಡಕವಾಗಿದ್ದ ಉತ್ತಮ ಪರಿಕರಗಳನ್ನು ಜೋಡಿಸಿಕೊಂಡು, ಹೊಸ ಬ್ರ್ಯಾಂಡ್ ಹುಟ್ಟುಹಾಕಲಾಗಿದೆ.
ಇದಕ್ಕಾಗಿ ಸೂರತ್, ಕೋಲ್ಕತ್ತಾ ಹಾಗೂ ದೆಹಲಿ ಇನ್ನೂ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ, ಟಿವಿಯ ತಂತ್ರಜ್ಞಾನಗಳನ್ನು ಆಯ್ದು ತರಲಾಗಿದೆ. ಈ ಎಲ್ಲಾವನ್ನು ಒಟ್ಟುಗೂಡಿಸಿ ಒಂದು ಸುಂದರ ಹಾಗೂ ಗುಣಮಟ್ಟದ ಟಿವಿ ಬ್ರ್ಯಾಂಡ್ ನಿರ್ಮಿಸುವಲ್ಲಿ ಶಂಕರ್ ಯಶಸ್ವಿಯಾಗಿದ್ದಾರೆ.
ಇಂದು STVC ಸಾಕಷ್ಟು ಹೆಸರು ಮಾಡುತ್ತಿದೆ. ತನ್ನ ಗುಣಮಟ್ಟದಿಂದ ಮಾರುಕಟ್ಟೆಯಲ್ಲಿ ಭದ್ರ ಹಿಡಿತ ಸಾಧಿಸುತ್ತಿದೆ. ಶಾಲೆ, ದೇವಸ್ಥಾನ, ಮಸೀದಿಗಳಲ್ಲೂ STVCಯನ್ನು ನೀವು ನೋಡಿರಬಹುದು. ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ ಕೆಲ ಪ್ರತಿಷ್ಠಿತ ವಿದ್ಯಾಸಂಸ್ಥೆಗಳು STVC ಬ್ರ್ಯಾಂಡ್ ಅನ್ನು ಮೆಚ್ಚಿಕೊಂಡಿವೆ. ಜಿಎಲ್ ಜ್ಯುವೆಲ್ಲರ್ಸ್, ಮುಳಿಯ ಜ್ಯುವೆಲ್ಲರ್ಸ್ ಮೊದಲಾದ ಉದ್ಯಮ ಸಂಸ್ಥೆಗಳು ಹಾಗೂ ರೋಟರಿ, ಜೆಸಿಐ ಅನೇಕ ಸೇವಾ ಸಂಸ್ಥೆಗಳು STVC ಬ್ರ್ಯಾಂಡ್ ಕಡೆ ಆಕರ್ಷಿತಗೊಂಡು, ಖರೀದಿಸಿವೆ. ಪುತ್ತೂರು ಸರಕಾರಿ ಆಸ್ಪತ್ರೆಯಲ್ಲೂ STVC ಟಿವಿಯನ್ನು ನೀವು ಕಾಣಬಹುದು.
ತನ್ನ ಗುಣಮಟ್ಟದಿಂದಲೇ ಸದ್ದು ಮಾಡುತ್ತಿರುವ STVC ಸಂಸ್ಥೆಯ ಕೇಂದ್ರ ಕಚೇರಿ ಇರುವುದು ಪುತ್ತೂರು ಜಿಎಲ್ Complexನಲ್ಲಿ ಹಾಗೂ ಇದರ ತಯಾರಿಕಾ ಘಟಕ ಬಾಲವನ ಪಕ್ಕದ ಬೀರಮಲೆಯಲ್ಲಿ.
STVC ವಿಶೇಷತೆ:
– ITO ಪ್ರಿಂಟ್ : ಪೆನಲ್ ಹೊಂದಿರುವಂತಹದ್ದು ಹಾಗೂ Service friendly
– ಕರಾವಳಿ ಭಾಗದ ಮಾಯಿಶ್ಚರ್ ಸಮಸ್ಯೆಗೆ ಮುಕ್ತಿ: ಕರಾವಳಿ ಭಾಗದ ಹವಾಮಾನದಿಂದಾಗಿ ಎಲೆಕ್ಟ್ರೋನಿಕ್ ಉಪಕರಣಗಳಿಗೆ ಮಾಯಿಶ್ಚರ್ ಸಮಸ್ಯೆ ಕಾಡುತ್ತಿರುತ್ತದೆ. ಆದರೆ STVCಯಲ್ಲಿ ಇದಕ್ಕೆ ಪರಿಹಾರ ನೀಡಲಾಗಿದೆ.
– 3 Layer ರಿಫ್ಲೆಕ್ಟರ್: ಸಾಮಾನ್ಯವಾಗಿ 2 Layer ಹಾಕಲಾಗುತ್ತದೆ.
– QLED: ಕ್ವಾಂಟಮ್ LED
– ಆ್ಯಂಡ್ರೋಯ್ಡ್ ,Google tv Softwar
e