ಟ್ರೆಂಡಿಂಗ್ ನ್ಯೂಸ್

ಈ ಬಾರಿಯ ಹಲಸು – ಹಣ್ಣು ಮೇಳದಲ್ಲಿ ಆಯೋಜನೆಗೊಂಡಿವೆ ಹಲವು ಸ್ಪರ್ಧೆಗಳು!! 7, 8ರಂದು ನಡೆಯುವ ವಿವಿಧ ಸ್ಪರ್ಧೆಗಳ ಸಮಯ ಹೀಗಿವೆ…

GL
ಜೂನ್ 6, 7 ಹಾಗೂ 8ರಂದು ಪುತ್ತೂರಿನ‌ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣು ಮೇಳ ಅನಾವರಣಗೊಳ್ಳಲಿದ್ದು, ಸ್ಪರ್ಧೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿಂದ ಕುತೂಹಲಕ್ಕೆ ಕಾರಣವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನವತೇಜ ಟ್ರಸ್ಟ್, ರೋಟರಿ ಕ್ಲಬ್ ಪುತ್ತೂರು ಯುವ ಹಾಗೂ ಜೆಕಾಂ ಪುತ್ತೂರು ಸಹಯೋಗದಲ್ಲಿ ನಡೆಯಲಿರುವ ಹಲಸು ಹಣ್ಣು ಮೇಳದಲ್ಲಿ ವಿವಿಧ ಸ್ಪರ್ಧೆಗಳು ಈ ಬಾರಿ ಮೇಳದ ರಂಗನ್ನು ಹೆಚ್ಚಿಸಲಿದೆ.

chennai-shopping
maithri

ಜೂನ್ 6, 7 ಹಾಗೂ 8ರಂದು ಪುತ್ತೂರಿನ‌ ಕಿಲ್ಲೆ ಮೈದಾನದಲ್ಲಿ ಹಲಸು ಹಣ್ಣು ಮೇಳ ಅನಾವರಣಗೊಳ್ಳಲಿದ್ದು, ಸ್ಪರ್ಧೆ ಸೇರಿದಂತೆ ಹಲವು ವೈಶಿಷ್ಟ್ಯತೆಗಳಿಂದ ಕುತೂಹಲಕ್ಕೆ ಕಾರಣವಾಗಿದೆ.

ಪ್ರಮುಖವಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿ ಇದೇ ಮೊದಲ ಬಾರಿಗೆ ಹಲಸು ಮೇಳದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಜೂನ್ 7 ಹಾಗೂ 8ರಂದು ಆಯೋಜಿಸಿರುವ ಈ ಸ್ಪರ್ಧೆಗಳಿಗೆ ಸಮಯವನ್ನು ನಿಗದಿ ಪಡಿಸಲಾಗಿದೆ.

ಜೂನ್ 7ರಂದು ಹಲಸಿನ ತೂಕ ಊಹಿಸುವ ಸ್ಪರ್ಧೆ ಮಧ್ಯಾಹ್ನ 2 ಗಂಟೆಗೆ, ಹಲಸು ಎತ್ತುವ ಸ್ಪರ್ಧೆ ಮಧ್ಯಾಹ್ನ 2.30ಕ್ಕೆ, ಹಲಸಿನ ಹಣ್ಣು ಬಿಡಿಸುವ ಸ್ಪರ್ಧೆ ಮಧ್ಯಾಹ್ನ‌ 3 ಗಂಟೆಗೆ, ಹಲಸಿನ ಹಣ್ಣು ತಿನ್ನುವ ಸ್ಪರ್ಧೆ ಮಧ್ಯಾಹ್ನ 3.30ಗೆ ನಡೆಯಲಿದೆ.

ಜೂನ್ 8ರಂದು ಹಲಸಿನ ಪ್ರಬಂಧ ಸ್ಪರ್ಧೆ ಬೆಳಿಗ್ಗೆ 11 ಗಂಟೆಗೆ (16 ವರ್ಷದ ಕೆಳಗಿನವರಿಗೆ), ಚಿತ್ರ ಬಿಡಿಸುವ ಸ್ಪರ್ಧೆ (16 ವರ್ಷದ ಕೆಳಗಿನವರಿಗೆ) ಬೆಳಿಗ್ಗೆ 11 ಗಂಟೆಗೆ, ಅಡಿಗೆ (ಸಿಹಿ + ಖಾರ) ಸ್ಪರ್ಧೆ ಮಧ್ಯಾಹ್ನ 12 ಗಂಟೆಗೆ, ಎಲೆಯ ಕೊಟ್ಟೆ / ಮೂಡೆ ಕಟ್ಟುವ ಸ್ಪರ್ಧೆ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಸ್ಪರ್ಧೆಗೆ ನೋಂದಾಯಿಸಲು 94818 47763, 98455 22020 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಲೈವ್ ಜ್ಯೂಸ್ ಕೌಂಟರ್ ಆರಂಭಿಸಿದ ಪ್ರಭುಸ್! ಪ್ರಭುಸ್ ಆಗಿ ಮರುನಾಮಕರಣಗೊಂಡ ಪ್ರಭು ಚರುಂಬುರಿ!!

ಪುತ್ತೂರು: ಪ್ರಸಿದ್ಧ ಚರುಂಬುರಿ ಹಾಗೂ ಚಾಟ್ಸ್ ಸಂಸ್ಥೆ ಪ್ರಭು ಚರುಂಬುರಿ ಇದೀಗ ಪ್ರಭುಸ್ ಆಗಿ…

ಸಿಬಿಜಿ ಘಟಕ ಅಧ್ಯಯನಕ್ಕೆ ರಾಜ್ಯದಿಂದ ತಂಡ | ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕ ಲೋಕಾರ್ಪಣಾ ಸಮಾರಂಭದಲ್ಲಿ ಶಾಸಕ ಅಶೋಕ್ ರೈ

ಪುತ್ತೂರು: ಪುತ್ತೂರಿನ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕದ ಬಗ್ಗೆ ಬಿಬಿಎಂಪಿಯಲ್ಲೂ ಚರ್ಚೆ ನಡೆದಿದೆ.…