Gl harusha
ಕರಾವಳಿಸ್ಥಳೀಯ

ಕಾಂಗ್ರೆಸ್ ಮುಖಂಡನ  ಪುತ್ರ ಹೃದಯಾಘಾತಕ್ಕೊಳಗಾಗಿ ನಿಧನ

ಮಂಗಳೂರು ಬಾವ ಅವರ ಪುತ್ರ ಮುಹಮ್ಮದ್ ಆಸಿಫ್ (24) ಹೃದಯಾಘಾತಕ್ಕೊಳಗಾಗಿ ಗುರುವಾರ ನಿಧನ ಹೊಂದಿದರು.

ಈ ಸುದ್ದಿಯನ್ನು ಶೇರ್ ಮಾಡಿ

ಸುರತ್ಕಲ್: ಕಾಂಗ್ರೆಸ್ ಮುಖಂಡ ಕೃಷ್ಣಾಪುರ ನಿವಾಸಿ ಮಂಗಳೂರು ಬಾವ ಅವರ ಪುತ್ರ ಮುಹಮ್ಮದ್ ಆಸಿಫ್ (24) ಹೃದಯಾಘಾತಕ್ಕೊಳಗಾಗಿ ಗುರುವಾರ ನಿಧನ ಹೊಂದಿದರು.

srk ladders
Pashupathi
Muliya

ಗುರುವಾರ ಮನೆಯಲ್ಲಿದ್ದ ವೇಳೆ ಎದೆನೋವು, ಕೈಕಾಲು ನೋವು, ಬೆನ್ನು ನೋವು ಎಂದು ತಿಳಿಸಿದ್ದರು. ಬಳಿಕ ಎದೆನೋವು ಹೆಚ್ಚಾದ ಪರಿಣಾಮ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮಂಗಳೂರು ಬಾವ ಅವರ 4 ಗಂಡು ಮತ್ತು 2 ಹೆಣ್ಣು ಮಕ್ಕಳ ಪೈಕಿ ಮುಹಮ್ಮದ್ ಆಸಿಫ್ ಕೊನೆಯವರಾಗಿದ್ದರು. ಅವರು ತಂದೆ, ತಾಯಿ, ಮೂವರು ಸಹೋದರರು ಮತ್ತು ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಕೃಷ್ಣಾಪುರ 7ನೇ ಬ್ಲಾಕ್ ನ ಈದ್ಧಾ ಖಬಸ್ತಾನದಲ್ಲಿ ನಡೆಯಿತು.

ಸಂತಾಪ: ಕಾಂಗ್ರೆಸ್ ಮುಖಂಡ ಮಂಗಳೂರು ಬಾವ ಅವರ

ಪುತ್ರ ಮುಹಮ್ಮದ್ ಆಸಿಫ್ ನಿಧನಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪುರುಷೋತ್ತಮ ಚಿತ್ರಾಪುರ, ಪ್ರಧಾನ ಕಾರ್ಯದರ್ಶಿಗಳಾದ ರೆಹಮಾನ್ ಖಾನ್ ಕುಂಜತ್ತಬೈಲ್, ರಾಜೇಶ್ ಕುಳಾಯಿ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts