ಕರಾವಳಿಸ್ಥಳೀಯ

ಧರ್ಮಸ್ಥಳದಲ್ಲಿ ವಾಹನಗಳನ್ನು ಚೆಂಡಾಡಿದ ಪುಂಡಾನೆ!! ಹೆದ್ದಾರಿಗಿಳಿದ ಆನೆಯಿಂದ ವಾಹನಗಳಿಗೆ ಹಾನಿ

ಧರ್ಮಸ್ಥಳ ಗ್ರಾಮದ ‌ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಧರ್ಮಸ್ಥಳ ಗ್ರಾಮದ ‌ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

ಗುರುವಾರ ಬೆಳಗ್ಗೆ 7.40 ರ ಸುಮಾರಿಗೆ ಕಾಡಾನೆ ಬೊಳಿಯಾರು ಸಮೀಪ ಹೆದ್ದಾರಿಯಲ್ಲಿ ಕಾಣಿಸಿಕೊಂಡಿದೆ.

SRK Ladders

ರಸ್ತೆ ದಾಟುತ್ತಿದ್ದ ಕಾಡಾನೆ ರಸ್ತೆಯಲ್ಲಿಯೇ ನಿಂತಿತ್ತು. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಬಂದ ಕೆಎಸ್ಸಾರ್ಟಿಸಿ ಬಸ್ಸನ್ನು ಅಡ್ಡಗಟ್ಟಿದ ಕಾಡಾನೆ ಬಸ್ಸಿನ ಮು‌ಂಭಾಗಕ್ಕೆ ತಿವಿದಿದ್ದು ಬಸ್ಸಿನ ಮುಂಭಾಗ ಜಖಂಗೊಂಡಿದೆ.

ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಇದೇ ವೇಳೆ ರಸ್ತೆಯಲ್ಲಿ ಬಂದ ದ್ವಿಚಕ್ರ ವಾಹನವನ್ನು ಬಿಟ್ಟು ಅದರ ಸವಾರ ಆನೆಯಿಂದ‌ ತಪ್ಪಿಸಿಕೊಂಡಿದ್ದು ವಾಹನವನ್ನು ಕಾಡಾನೆ ಹಾನಿಗೊಳಿಸಿದೆ.

ಬೊಳಿಯಾರು ಹಾಗೂ ಮುಳಿಕಾರು ಪರಿಸರದಲ್ಲಿ ಎರಡು ದಿನಗಳಿಂದ ಕಾಡಾನೆಗಳ ಹಿಂಡು ತಿರುಗಾಡುತ್ತಿದ್ದು ಕೃಷಿಕರಿಗೆ ತೊಂದರೆ ಉಂಟುಮಾಡುತ್ತಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3