Gl
ರಾಜ್ಯ ವಾರ್ತೆಸ್ಥಳೀಯ

ಸಕಲೇಶಪುರ – ಬಾಳ್ಳುಪೇಟೆ ನಡುವೆ ಭೂ ಕುಸಿತ: 10 ರೈಲುಗಳ ಸಂಚಾರ ರದ್ದು | ರದ್ದಾದ ರೈಲುಗಳು ಯಾವುವು? ಇಲ್ಲಿದೆ ವಿವರ

ಬೆಂಗಳೂರು : ಈಗಾಗಲೇ ಸಕಲೇಶಪುರ - ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಈಗಾಗಲೇ ಸಕಲೇಶಪುರ – ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾದ ಪರಿಣಾಮ ಐದು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಎರಡು ರೈಲುಗಳ ವೇಳೆ ಕಡಿತ, ಮತ್ತೆರಡು ರೈಲುಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿತ್ತು. ಈ ಬೆನ್ನಲ್ಲೇ ಮತ್ತೆ 10 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.

Pashupathi

ಈ ಕುರಿತಂತೆ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಸಕಲೇಶಪುರ-ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಕಾರಣ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

akshaya college

ರದ್ದುಗೊಂಡ ರೈಲುಗಳು:

1) ರೈಲು ಸಂಖ್ಯೆ 16595 ಕೆಎಸ್‌ಆರ್ ಬೆಂಗಳೂರು-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.

2. ರೈಲು ಸಂಖ್ಯೆ 16596 ಕಾರವಾರ-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ

3. ರೈಲು ಸಂಖ್ಯೆ 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.

4. ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್‌ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.

5. ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.

6. 6) ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್ಪ್ರೆಸ್ ವಿಶೇಷ ರೈಲು ದಿನಾಂಕ 13.08.2024 ಮತ್ತು 14.08.2024 ರಂದು ರದ್ದಾಗಿದೆ.

7. ರೈಲು ಸಂಖ್ಯೆ 16516 ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ.

8. ರೈಲು ಸಂಖ್ಯೆ 16575 ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ ರೈಲು ದಿನಾಂಕ 13.08.2024 ರಂದು ರದ್ದಾಗಿದೆ.

9. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್‌ಆರ್ ಬೆಂಗಳೂರು ಎಕ್ಸ್ಪ್ರೆಸ್ ರೈಲು 12.08.2024 ಮತ್ತು 13.08.2024 ರಂದು ರದ್ದಾಗಿದೆ.

10. ರೈಲು ಸಂಖ್ಯೆ 16511 ಕೆಎಸ್‌ಆರ್ ಬೆಂಗಳೂರು-ಕಣ್ಣೂರು ಎಕ್ಸ್ಪ್ರೆಸ್ ರೈಲು ದಿನಾಂಕ 12.08.2024 ಮತ್ತು 13.08.2024 ರಂದು ರದ್ದಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

1 of 109