ಪುತ್ತೂರು: ಪ್ರಸಿದ್ಧ ಕಾರಣಿಕ ಕ್ಷೇತ್ರವಾಗಿರುವ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶುಕ್ರವಾರ ನಾಗರಪಂಚಮಿ ಆಚರಣೆ ನಡೆಯಿತು.
ಶ್ರೀ ಸುಬ್ರಹ್ಮಣ್ಯ ದೇವರಿಗೆ ಪೂಜೆ ನಡೆದು, ನಾಗ ದೇವರಿಗೆ ತನು ಅರ್ಪಿಸಲಾಯಿತು.
ಆರ್ಯಾಪು ಗ್ರಾಮ ದೇವಸ್ಥಾನವಾದರೂ, ಈ ಕ್ಷೇತ್ರ ಹತ್ತೂರಿನ ಭಕ್ತರನ್ನು ಆಕರ್ಷಿಸುತ್ತಿದೆ. ಭಕ್ತರ ಅಭೀಷ್ಟಗಳನ್ನು ಈಡೇರಿಸುವ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿದ್ದು, ಊರ ಹಾಗೂ ಪರವೂರ ಭಕ್ತರು ನಾಗರಪಂಚಮಿ ಆಚರಣೆಯಲ್ಲಿ ಪಾಲ್ಗೊಂಡರು.