ಕರಾವಳಿಸ್ಥಳೀಯ

ಮಂಗಳೂರು ಕಾರಾಗೃಹಕ್ಕೆ ದಾಳಿ; ಮೊಬೈಲ್‌, ಗಾಂಜಾ, ಡ್ರಗ್ಸ್ ವಶ

ಮಂಗಳೂರು ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಅಯುಕ್ತ ಅನುಪಮ್ ಅಗ್ರವಾಲ್ ಆದೇಶದಂತೆ ಇಂದು ಮುಂಜಾವ ಸುಮಾರು 4 ಗಂಟೆಗೆ ದಾಳಿ‌ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು.‌

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು ನಗರದ ಕೊಡಿಯಾಲ್‌ ಬೈಲ್‌ನಲ್ಲಿರುವ ಕಾರಾಗೃಹಕ್ಕೆ ಗುರುವಾರ ಮುಂಜಾನೆ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸ್ ಅಯುಕ್ತ ಅನುಪಮ್ ಅಗ್ರವಾಲ್ ಆದೇಶದಂತೆ ಇಂದು ಮುಂಜಾವ ಸುಮಾರು 4 ಗಂಟೆಗೆ ದಾಳಿ‌ ನಡೆಸಿದ ಪೊಲೀಸರು ತಪಾಸಣೆ ನಡೆಸಿದರು.‌

ಈ ಸಂದರ್ಭ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಡಿವೈಸ್, 5 ಇಯರ್ ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, ಕತ್ತರಿಗಳು, 3 ಕೇಬಲ್‌ಗಳು, ವಿವಿಧ ಮಾದರಿಯ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

SRK Ladders

ಕಾರ್ಯಾಚರಣೆಯಲ್ಲಿ ಇಬ್ಬರು ಡಿಸಿಪಿ, ಮೂವರು ಎಸಿಪಿ ಸಹಿತ‌ ಮತ್ತಿತರ ಪೊಲೀಸರು ಪಾಲ್ಗೊಂಡಿದ್ದರು. ಸಾಕಷ್ಟು ಭದ್ರತೆಯ ಹೊರತಾಗಿಯೂ ಮೊಬೈಲ್ ಮತ್ತಿತರ ಸಾಮಗ್ರಿಗಳು, ಗಾಂಜಾ‌ ಮತ್ತು ಡ್ರಗ್ಸ್‌ಗಳನ್ನು ಜೈಲಿನೊಳಗೆ ಹೇಗೆ ಕೊಂಡೊಯ್ಯಲಾಯಿತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ‌.

ಈ ಸುದ್ದಿಯನ್ನು ಶೇರ್ ಮಾಡಿ

Related Posts

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿಯ 2025ನೇ ಸಾಲಿನ ಕ್ಯಾಲೆಂಡರ್, ಡೈರಿ ಬಿಡುಗಡೆ

ಎಸ್.ಕೆ. ಗೋಲ್ಡ್ ಸ್ಮಿತ್ಸ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಲಿ. ಮಂಗಳೂರು ಇದರ 2025ನೇ…

1 of 3