ಸ್ಥಳೀಯ

ಗುಂಡಿಗದ್ದೆ: ಹದಗೆಟ್ಟ ರಸ್ತೆಯ ಕಾಮಗಾರಿ

ಸಂಟ್ಯಾರ್ - ಗುಂಡಿಗದ್ದೆ - ಮರಿಕೆ - ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಟ್ಯಾರ್ – ಗುಂಡಿಗದ್ದೆ – ಮರಿಕೆ – ಮಿತ್ತಡ್ಕ ರಸ್ತೆಯ ಗುಂಡಿಗದ್ದೆ ಎಂಬಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಯತೀಶ್ ದೇವ ಅವರ ನೇತೃತ್ವದಲ್ಲಿ ದುರಸ್ತಿ ಪಡಿಸಲಾಯಿತು.

ಗ್ರಾಮ ಪಂಚಾಯತ್ ವಿಶೇಷ ಅನುದಾನದಲ್ಲಿ ಜೆಸಿಬಿ ಮತ್ತು ಟಿಪ್ಪರ್ ಬಳಸಿಕೊಂಡು ಮಳೆಯಿಂದ ಹಾನಿಯಾದ ರಸ್ತೆಗೆ ವೇಸ್ಟ್ ಡಾಂಬರ್ ಮತ್ತು ಜಲ್ಲಿಕಲ್ಲು ಹಾಕಿ, ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಿಕೊಡಲಾಯಿತು.

SRK Ladders

ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ, ಪಿ ಡಿ ಓ ನಾಗೇಶ್, ಗ್ರಾಮ ಪಂಚಾಯತ್ ಸದಸ್ಯರಾದ ಯತೀಶ್ ದೇವ, ಹರೀಶ್ ನಾಯಕ್ ಅವರು ವಿಶೇಷ ಅನುದಾನ ತರಿಸಿಕೊಂಡಿದ್ದು, ಕಾಮಗಾರಿ ನಡೆಸಲಾಯಿತು.

ಸ್ಥಳೀಯರಾದ ಶಶಿಧರ ಗೌಡ ಮರಿಕೆ, ಕಿಶೋರ್ ಗೌಡ ಮರಿಕೆ, ಮಹೇಶ್ ಗೌಡ ಮರಿಕೆ, ವಿಶ್ವೇಶ ಮರಿಕೆ ಮಿತ್ತಡ್ಕ, ರಾಜೇಶ್ ಕರ್ಕೇರ ಮರಿಕೆ, ಸದಾಶಿವ ಗುಂಡಿಗದ್ದೆ, ಸುಬ್ರಮಣ್ಯ ನಾಯಕ್ ಮರಿಕೆ ಮೊದಲಾದವರು ಇದ್ದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3