ಮಂಗಳೂರು: ಕಂದಾಯ ಕಚೇರಿಯಲ್ಲಿ ಹಾಗೂ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ ಕಡತ ವಿಲೇವಾರಿ ವಿಳಂಬ ಆಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮಂಗಳೂರು ವಕೀಲರ ಸಂಘದ ವತಿಯಿಂದ ಸಹಾಯಕ ಆಯುಕ್ತರ ಗಮನ ಸೆಳೆಯಲಾಯಿತು.
ಮಂಗಳೂರು ಸಹಾಯಕ ಆಯುಕ್ತರನ್ನು ಭೇಟಿ ಮಾಡಿದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ಕಂದಾಯ ಕಚೇರಿಗಳಲ್ಲಿ ನ್ಯಾಯವಾದಿಗಳಿಗೆ ತೊಂದರೆ ಆಗುತ್ತಿದೆ. ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿಯೂ ನೂರಾರು ಕಡತಗಳು ಆದೇಶಕ್ಕೆ ಬಾಕಿ ಇವೆ. ಈ ಬಗ್ಗೆ ವಕೀಲರ ಸಂಘಕ್ಕೆ ದೂರು ಬಂದಿದ್ದು, ಇದರ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಲಾಯಿತು.
ಪ್ರತಿಕ್ರಿಯಿಸಿದ ಸಹಾಯಕ ಆಯುಕ್ತರು, ಮುಂದಿನ ಹತ್ತು ದಿನಗಳಲ್ಲಿ ಎಲ್ಲಾ ಕಡತಗಳ ವಿಲೇವಾರಿ ಮಾಡುವುದಾಗಿ ಭರವಸೆ ನೀಡಿದರು.