ಪುತ್ತೂರು: ಸುಮಾರು ಒಂದು ತಿಂಗಳಿಗೂ ಅಧಿಕ ಕಾಲದ ಕಾಯುವಿಕೆ ನಾಳೆಗೆ ಕೊನೆಯಾಗಲಿದೆ.
ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಲೋಕಸಭಾ ಚುನಾವಣೆಯ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಫಲಿತಾಂಶ ಹೊರಬೀಳಲಿದೆ. ಈ ಹಿನ್ನೆಲೆಯಲ್ಲಿ ಪ್ರಬಲ ಪೈಪೋಟಿ ನೀಡಿರುವ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಮಾತನಾಡಿಸಿದ್ದು, ಅವರ ರಿಯಾಕ್ಷನ್ ಇಲ್ಲಿದೆ.
ಇನ್ನೊಬ್ಬರಿಗೆ ನೋವಾಗದಂತೆ ವಿಜಯೋತ್ಸವ: ಪದ್ಮರಾಜ್
ಪದ್ಮರಾಜ್ ಆರ್. ಅವರು ಮಾತನಾಡಿ, ಸುಮಾರು 1.20 ಲಕ್ಷ ಮತಗಳ ಅಂತರದಿಂದ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎನ್ನುವುದನ್ನು ಈ ಮೊದಲೇ ತಿಳಿಸಿದ್ದೆ. ಚುನಾವಣೆಯನ್ನು ಎಥಿಕ್ಸ್ ಇಟ್ಟುಕೊಂಡು ಎದುರಿಸಿದ್ದೇವೆ. ಜನರ ಒಲವು ಗಳಿಸಿದ ಸಂತೃಪ್ತಿ ನಮಗಿದೆ. ಫಲಿತಾಂಶ ಏನೇ ಬಂದರೂ ಎದುರಿಸುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸುವಾಗಲೂ ಇನ್ನೊಬ್ಬರಿಗೆ ನೋವಾಗದಂತೆ ಆಚರಿಸಬೇಕಾದ ಕರ್ತವ್ಯ ನಮ್ಮ ಮೇಲಿದೆ. ನೆಗೆಟೀವ್ ವಿಚಾರಗಳು ಬಂದರೂ ತಾಳ್ಮೆಯಿಂದ ಇರಬೇಕು ಎಂದರು.
ಮೋದಿ ಮತ್ತೊಮ್ಮೆ ಪ್ರಧಾನಿ: ಬ್ರಿಜೇಶ್ ಚೌಟ
ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಮಾತನಾಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದು ಖಂಡಿತಾ ಎಂದ ಅವರು, ನಾಳೆ ಮಧ್ಯಾಹ್ನ ಫಲಿತಾಂಶ ಹೊರಬೀಳಲಿದ್ದು, ಅಲ್ಲಿವರೆಗೆ ಕಾಯೋಣ ಎಂದರು.