ಕರಾವಳಿಸ್ಥಳೀಯ

ಬಂಟ್ವಾಳ: ನಿಯಂತ್ರಣ ತಪ್ಪಿದ ಲಾರಿ ಪಲ್ಟಿಯಾಗಿ ಬಸ್ ಗೆ ಡಿಕ್ಕಿ, 8 ಮಂದಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬಂಟ್ವಾಳ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಕೆ.ಎಸ್.ಆರ್.ಟಿ.ಸಿ.ಬಸ್ ಗೆ ಡಿಕ್ಕಿಯಾಗಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿ ಸೇರಿದಂತೆ ಒಟ್ಟು 8 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ವಗ್ಗ ಸಮೀಪದ ಕಾಡುಬೆಟ್ಟು ಕ್ರಾಸ್ ಬಳಿ ನಡೆದಿದೆ.

ಬಿ.ಸಿ.ರೋಡು – ಕಡೂರು ರಾಜ್ಯ ಹೆದ್ದಾರಿಯ ವಗ್ಗ ಸಮೀಪದ ಕಾರಿಂಜ ಕಾಡಬೆಟ್ಟು ತಿರುವಿನಲ್ಲಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ಕಡೆಯಿಂದ ಬೆಳ್ತಂಗಡಿ ಕಡೆಗೆ ಹೋಗುವ ಬಸ್ ಗೆ ಡಿಕ್ಕಿಯಾಗಿದೆ. ಈ ಸಂದರ್ಭದಲ್ಲಿ ಬಸ್ ಚಾಲಕ , ಅದರಲ್ಲಿದ್ದ ಪ್ರಯಾಣಿಕರು ಹಾಗೂ ಲಾರಿ ಚಾಲಕನಿಗೆ ಗಾಯವಾಗಿದೆ.

SRK Ladders

ಲಾರಿ ಚಾಲಕ ಚಿತ್ರದುರ್ಗ ಸಮೀಪದ ಹಿರಿಯೂರಿ‌ನ ಮಹೇಶ್ , ಬಸ್ ಚಾಲಕ ಉಮೇಶ್, ಪ್ರಯಾಣಿಕರಾದ ನಳಿನಿ ಬೆಳ್ತಂಗಡಿ, ವಿದ್ಯಾರ್ಥಿ‌ನಿ ಮಧುರಾ ಇರ್ವತ್ತೂರು, ರಕ್ಷಣ್ ವೇಣುಗೋಪಾಲ ಕಾವಳಪಡೂರು, ತಾರಾನಾಥ ಗರ್ಡಾಡಿ, ರೋಹಿಣಿ ಮದ್ದಡ್ಕ ಗಾಯಗೊಂಡಿದ್ದಾರೆ.

ಬಂಟ್ವಾಳ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

1 of 3