Gl
ದೇಶಸ್ಥಳೀಯ

52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಿಸಿದ ದೆಹಲಿ! ಇದು ಇತಿಹಾಸದಲ್ಲಿಯೇ ಮೊದಲ ಬಾರಿಗೆ ದಾಖಲಾದ ಗರಿಷ್ಠ ತಾಪಮಾನ!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು ಇರುವುದೇ ಹಾಗೆ. ಮಳೆ ಬಂದರೆ ಅತಿಯಾದ ಮಳೆ, ಚಳಿಗಾಲದಲ್ಲಿ ವಿಪರೀತ ಚಳಿ ಹಾಗೂ ಬೇಸಿಗೆಯಲ್ಲಿ ವಿಪರೀತ ಬಿಸಿಲು. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯ ಮಂಗೇಶ್‌ಪುರದಲ್ಲಿ ಬುಧವಾರ (ಮೇ 29) ಮಧ್ಯಾಹ್ನ 2.30ರ ಸುಮಾರಿಗೆ 52.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ದೇಶದ ತಾಪಮಾನ ಇದಾಗಿದೆ ಎಂದು ತಿಳಿದುಬಂದಿದೆ. ಚುರುಗುಡುವ ಬಿಸಿಲು, ಮನೆಯಲ್ಲಿ ಕೂತರೂ ಬೆವರುವ ಪರಿಸ್ಥಿತಿ ಎದುರಾದ ಕಾರಣ ರಾಜಧಾನಿ ಪರಿತಪಿಸುವಂತಾಗಿದೆ ಎಂದು ತಿಳಿದುಬಂದಿದೆ. ಜನ

rachana_rai
Pashupathi
akshaya college
Balakrishna-gowda

ದೆಹಲಿಯತ್ತ ಉಷ್ಣಮಾರುತ ಅಪ್ಪಳಿಸುತ್ತಿದೆ. ಮಳೆಯೂ ಇಲ್ಲದ ಕಾರಣ ಬಿಸಿಲು ಮತ್ತಷ್ಟು ಜೋರಾಗಿದೆ. ನಿರೀಕ್ಷೆಗಿಂತ ಬರೋಬ್ಬರಿ 9 ಡಿಗ್ರಿ ಸೆಲ್ಸಿಯಸ್ ತಾಪಮಾನ ಹೆಚ್ಚಾಗಿರುವುದು ಜನ ಹೈರಾಣಾಗುವಂತೆ ಮಾಡಿದೆ. ದೆಹಲಿಯಲ್ಲಿ 2002ರಲ್ಲಿ 49.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದೇ ಇದುವರೆಗಿನ ದಾಖಲೆಯಾಗಿತ್ತು. ಆದರೀಗ, ತಾಪಮಾನವು 50 ಡಿಗ್ರಿ ಸೆಲ್ಸಿಯಸ್ ದಾಟಿರುವುದು ಜನರಿಗೆ ಚಿಂತೆಯಾಗಿದೆ. ತಾಪಮಾನದ ಕುರಿತು ದೆಹಲಿಯ ಹವಾಮಾನ ಇಲಾಖೆಯ ಕಚೇರಿಯು ಮಾಹಿತಿ ನೀಡಿದೆ.

pashupathi

ತಾಪಮಾನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದೆಹಲಿಯ ವಿದ್ಯುತ್ ಬೇಡಿಕೆ ಪ್ರಮಾಣವೂ ದಾಖಲೆಯಾಗಿದೆ. ದೆಹಲಿಯ ವಿದ್ಯುತ್ ಬಳಕೆಯು ಗುರುವಾರ ಮಧ್ಯಾಹ್ನದ 3.36ರ ಸುಮಾರಿಗೆ 8,300 ಮೆಗಾವ್ಯಾಟ್ ದಾಟಿದೆ. ಇದು ದೆಹಲಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಳಕೆಯಾದ ವಿದ್ಯುತ್ ಪ್ರಮಾಣ ಎಂಬ ದಾಖಲೆಯಾಗಿದೆ. ವಿದ್ಯುತ್ ಪೂರೈಕೆ ಕಂಪನಿಗಳ ಪ್ರಕಾರ ದೆಹಲಿಗೆ ನಿತ್ಯ 8,200 ಮೆಗಾ ವ್ಯಾಟ್ ವಿದ್ಯುತ್‌ ಬೇಕಾಗುತ್ತಿತ್ತು. ಆದರೆ, ತಾಪಮಾನ ಜಾಸ್ತಿಯಾದ ಕಾರಣ ಪ್ರತಿಯೊಂದು ಮನೆಯಲ್ಲೂ ನಿರಂತರವಾಗಿ ಫ್ಯಾನ್, ಕೂಲರ್ ಹಾಗೂ ಎ.ಸಿ ಬಳಸುತ್ತಿರುವ ಕಾರಣ ವಿದ್ಯುತ್ ಬೇಡಿಕೆಯೂ ದಾಖಲೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೆಹಲಿಯ ನಜಾಫ್‌ಗಢ, ಮಂಗೇಶ್‌ಪುರ ಹಾಗೂ ನರೇಲಾದಲ್ಲಿ ಗುರುವಾರ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಕನಿಷ್ಠ ಎಂಬಂತಾಗಿದೆ. ಇದರಿಂದಾಗಿ ಬಹುತೇಕ ನಗರಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಾಗಿದೆ. ಇನ್ನು ಹೆಚ್ಚು ಮರುಭೂಮಿ ಹೊಂದಿರುವ ರಾಜಸ್ಥಾನದ ಫಲೋಡಿಯಲ್ಲಿ ಗರಿಷ್ಠ 51 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬಂಗಾಳ ಕೊಲ್ಲಿಯಿಂದ ತಂಪು ಗಾಳಿ ಬೀಸುತ್ತಿರುವ ಕಾರಣ ಉತ್ತರ ಪ್ರದೇಶದಲ್ಲಿ ತಾಪಮಾನ ನಿಯಮಿತವಾಗಿದೆ ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕ್ರಿಯಾಶೀಲ ವ್ಯಕ್ತಿ ಮರಣದ ಬಳಿಕವೂ ಸಜೀವ | ಕಲಾಸಿರಿ ಗೊಂಬೆ ಬಳಗದ ಅಣ್ಣಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಉದಯ್

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಯಾರ ಮನಸ್ಸು ಮಿಡಿಯುತ್ತದೆಯೋ ಅವರು ಸಜೀವ ಆಗಿರುತ್ತದೆ ಎಂದು…

ಪುತ್ತೂರು ಹಿಂಜಾವೇ ಪ್ರತಿಭಟನೆಯಲ್ಲಿ ಶಾಸಕರ ನಿಂದನೆ ಆರೋಪ! | ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್’ನಿಂದ ಪೊಲೀಸರಿಗೆ ದೂರು

ಪುತ್ತೂರು: ಪುತ್ತೂರಿನಲ್ಲಿ ನಡೆದ ಹಿಂಜಾವೇ ಪ್ರತಿಭಟನೆಯಲ್ಲಿ ಸಾರ್ವಜನಿಕವಾಗಿ ಶಾಸಕ ಅಶೋಕ್ ರೈ…

ಜಗನ್ನೀವಾಸ್ ರಾವ್ ಅವರ ವಿರುದ್ಧವೂ ಕ್ರಮ!! ಇದುವರೆಗೆ ಪ್ರತಿಕ್ರಿಯೆ ನೀಡದಿರುವುದರ ಬಗ್ಗೆಯೂ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ

ಪುತ್ತೂರು: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಗುರುವಾರ ಪುತ್ತೂರಿನ ಬಿಜೆಪಿ ಕಚೇರಿಗೆ…

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜ್‌ ಪಾಟೀಲ್‌ ಅವರಿಗೆ ಪುತ್ತೂರು ವಕೀಲ ಸಂಘದಿಂದ ಸ್ವಾಗತ, ಅಭಿನಂದನೆ

ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಪಾಟೀಲ್‌ ಅವರು ಜೂನ್‌ 26…

1 of 115