ಸ್ಥಳೀಯ

ಹೆತ್ತಬ್ಬೆಗೆ ಹೆಗ್ಗಣ ಮುದ್ದು – ಗಾದೆಗೊಂದು ಅಪವಾದ ಇಲ್ಲಿದೆ!! ಮೂಗ ಮಗುವೆಂಬ ಕಾರಣಕ್ಕೆ ತಂದೆ – ತಾಯಿ ಜಗಳ! ಮಗುವನ್ನು ಮೊಸಳೆ ನಾಲೆಗೆಸೆದ ಅಮಾನವೀಯ ಕೃತ್ಯ!!!

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ: ‘ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು’ ಎಂಬ ಮಾತು ನಾವು ನೀವು ಕೇಳೇ ಇರ್ತೀವಿ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಾತ್ರ ಆ ಕೂಸು ಅಮಾನವೀಯ ಮತ್ತು ಆಘಾತಕಾರಿಯಾಗಿ ಮೃತಪಟ್ಟಿದೆ.

ಗಂಡನೊಂದಿಗಿನ ಜಗಳದಿಂದ ಸಿಟ್ಟಿಗೆದ್ದ ಹೆಂಡತಿ ತಾನು ಹೆತ್ತ ಮಗುವನ್ನು ರಾತ್ರೋ ರಾತ್ರಿ ಮೊಸಳೆಗಳಿದ್ದ ನಾಲೆಗೆ ಎಸೆದಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ನಡೆದಿದೆ. ಸಾವಿತ್ರಿ ಎಂಬ ಮಹಿಳೆ ದುಷ್ಕೃತ್ಯವೆಸಗಿದ್ದಾರೆ.

SRK Ladders

ರಾತ್ರಿ ಗಂಡ ರವಿಕುಮಾರ್ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದ ಸಾವಿತ್ರಿ, ಕೋಪದಲ್ಲಿ ಮಗುವನ್ನ ಮೊಸಳೆಗಳಿದ್ದ ನಾಲೆಗೆ ಎಸೆದು ನಂತರ ಪಶ್ಚಾತಾಪದಿಂದಾಗಿ ಘಟನೆ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಮೊಸಳೆ ಬಾಯಲ್ಲಿ 6 ವರ್ಷದ ಮಗು ವಿನೋದ್ ಸಾವಿಗೀಡಾಗಿದೆ. ರಾತ್ರಿಯಿಂದ ಶವವನ್ನು ತೆಗೆಯಲು ಮುಳುಗು ತಜ್ಞರಿಂದ ಶೋಧ ಕಾರ್ಯ ಮುಂದುವರೆದಿದ್ದು, ಕೊನೆಗೂ ಮಗುವಿನ ಮೃತದೇಹ ಸಿಕ್ಕಿದೆ. ಮಗುವಿನ ಬಲಗೈಯನ್ನು ಮೊಸಳೆ ಕಚ್ಚಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಮಾತು ಬಾರದ ಮಗು: ಜಗಳಕ್ಕೆ ಇದೇ ನೆಪವಾಯ್ತಾ?
ಮೃತ 6 ವರ್ಷದ ವಿನೋದ್ ಮಾತು ಬಾರದ ಮಗು. ಇದನ್ನೇ ನೆಪಮಾಡಿಕೊಂಡಿದ್ದ ಗಂಡ ಕುಡಿದು ಹೆಂಡತಿ ಜತೆ ಜಗಳವಾಡುತ್ತಿದ್ದ. ಪ್ರತೀ ಬಾರಿ ಗಲಾಟೆಯಾದಾಗಲೂ ಮಗು ಸಾಯಲಿ ಅಂತಾ ಗಂಡ ರವಿಕುಮಾರ್ ಬೈಯ್ಯುತ್ತಿದ್ದ. ಹೀಗಾಗಿ ಗಂಡನ ಜತೆ ಗಲಾಟೆಯ ಕೋಪದಲ್ಲಿ ಮಗುವನ್ನು ಎತ್ತಿಕೊಂಡು ಹೋದ ತಾಯಿ ಸಾವಿತ್ರಿ ನಾಲೆಗೆ ಎಸೆದಿದ್ದಾರೆ.

ಬೆಳಗ್ಗೆ ಕಾರ್ಯಾಚರಣೆ ವೇಳೆ ಮಗುವಿನ ಜತೆ ಮೊಸಳೆ ಆಗಾಗ ಕಾಣಿಸಿಕೊಳ್ಳುತ್ತಿತ್ತು. ದಾಂಡೇಲಿಯ ಗ್ರಾಮೀಣ ಠಾಣಾ ಪೊಲೀಸರು ಮತ್ತು ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮುಳುಗು ತಜ್ಞರ ಸಹಕಾರದಲ್ಲಿ ಮಗುವಿನ ಮೃತದೇಹ ಪತ್ತೆ ಮಾಡಲಾಗಿದ್ದು, ಮೊಸಳೆಯ ಬಾಯಿಯಿಂದ ಮಗುವಿನ ಮೃತದೇಹವನ್ನು ಮುಳುಗು ತಜ್ಞರು ಬಿಡಿಸಿಕೊಂಡು ಬಂದಿದ್ದಾರೆ.

ಸದ್ಯ ಆರೋಪಿಗಳಾದ ರವಿ ಕುಮಾರ್ ಹಾಗೂ ಸಾವಿತ್ರಿ ದಂಪತಿಯನ್ನು ದಾಂಡೇಲಿ ಪೊಲೀಸರು ಬಂಧಿಸಿದ್ದು, ಆರೋಪಿಗಳ ವಿರುದ್ಧ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ವಿದ್ಯುತ್ ತಂತಿ ಕಡಿದು ಬಿದ್ದು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಸಹಿತ ಇಬ್ಬರು ರಿಕ್ಷಾ ಚಾಲಕರು ಮೃತ್ಯು!!

ವಿದ್ಯುತ್ ತಂತಿ ಕಡಿದು ಬಿದ್ದ ವಿದ್ಯುತ್ ತಗುಲಿದ ಪರಿಣಾಮ ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ…

1 of 3