Gl harusha
ರಾಜ್ಯ ವಾರ್ತೆಸ್ಥಳೀಯ

ಹೆಚ್ ಡಿ ರೇವಣ್ಣರನ್ನು ಬಂಧಿಸಿದ ಎಸ್ಐಟಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಮಹಿಳೆ ಅಪಹರಣದ ಪ್ರಕರಣವೊಂದರಲ್ಲಿ ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ (SIT) ಬಂಧಿಸಿ ವಿಚಾರಣೆಗಾಗಿ ತನ್ನ ಕಚೇರಿಗೆ ಕರೆದೊಯ್ದಿದೆ.

srk ladders
Pashupathi
Muliya

ಬೆಳಗ್ಗೆ ಹೊಳೆನರಸೀಪುರದ ತಮ್ಮ ಮನೆಯಲ್ಲಿದ್ದ ರೇವಣ್ಣ ಸಾಯಂಕಾಲದ ಹೊತ್ತಿಗೆ ನಗರದ ಪದ್ಮನಾಭನಗರದಲ್ಲಿರುವ ತಮ್ಮ ತಂದೆ ಹೆಚ್ ಡಿ ದೇವೇಗೌಡರ ಮನೆಗೆ ಬಂದಿದ್ದರು. ಮಹಿಳೆ ಅಪಹರಣ ಪ್ರಕರಣದಲ್ಲಿ ರೇವಣ್ಣರ ನಿರೀಕ್ಷಣಾ ಜಾಮೀನು ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದ ಕೂಡಲೇ ಎಸ್ಐಟಿ ಅಧಿಕಾರಿಗಳು, ರೇವಣ್ಣ ಮಾಜಿ ಪ್ರಧಾನಿಯವರ ಮನೆಯಲ್ಲಿರುವ ಮಾಹಿತಿ ಪಡೆದು ಅವರನ್ನು ತಮ್ಮ ವಶಕ್ಕೆ ಪಡೆದರು.

ಅಧಿಕಾರಿಗಳು ರೇವಣ್ಣರನ್ನು ಬೆಂಗಳೂರು ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿ ಕಾರ್ಲಟನ್‌ ಭವನಕ್ಕೆ ಕರೆದೊಯ್ದರು. ಇಲ್ಲಿರುವ ಸಿಐಡಿ ಕಚೇರಿಯಲ್ಲೇ ಎಸ್ಐಟಿ ಕಚೇರಿ ಇದೆ. ಭವನದ ಸುತ್ತ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts