ಬೆಂಗಳೂರು: ಬುಧವಾರ ಘೋಷಿಸಲಾದ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೆಂಗೇರಿಯ ರಾಮೋಹಳ್ಳಿಯಲ್ಲಿರುವ ಯೂನಿವರ್ಸಲ್ ಪಿಯು ಕಾಲೇಜಿನ ವಿದ್ಯಾರ್ಥಿ ಗಂಧಂ ಗಿರಿ ವರುಣ್ ಸಂದೇಶ್ 9ನೇ ರ‍್ಯಾಂಕ್ ಪಡೆದಿದ್ದಾರೆ.
600 ಅಂಕಗಳಿಗೆ 588 ಅಂಕ ಗಳಿಸುವ ಮೂಲಕ ಅವರು ಈ ಸಾಧನೆ ಮಾಡಿದ್ದಾರೆ.
ವಿಶೇಷವೆಂದರೆ, ಗಂಧಂ ಗಿರಿ ವರುಣ್ ಸಂದೇಶ್ ಮೂಲತಃ ಆಂಧ್ರದ ನೆಲ್ಲೂರಿನವರು. ಐಎಎಸ್ ಮಾಡುವ ಕನಸಿನೊಂದಿಗೆ ಅವರು ಯೂನಿವರ್ಸಲ್ ಪಿಯು ಕಾಲೇಜಿಗೆ ಸೇರ್ಪಡೆಯಾಗಿದ್ದಾರೆ. ಅವರ ತಂದೆ ಹಾಗೂ ತಾಯಿ ಇಬ್ಬರೂ ಶಿಕ್ಷಕರು.
ಗಂಧಂ ಗಿರಿ ವರುಣ್ ಸಂದೇಶ್ ಅವರನ್ನು ಯೂನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ ಅಭಿನಂದಿಸಿದ್ದಾರೆ.
ಯೂನಿವರ್ಸಲ್ ಸಂಸ್ಥೆಯ 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದು, 12 ವಿದ್ಯಾರ್ಥಿಗಳು ಫಸ್ಟ್ ಕ್ಲಾಸ್ ಪಾಸಾಗಿದ್ದು, ಉಳಿದಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಿರ್ಣಾರಾಗುವುದರ ಮೂಲಕ ಯೂನಿವರ್ಸಲ್ ಸಂಸ್ಥೆಯು 100% ರಿಸಲ್ಟ್ ಪಡೆದಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ