Gl jewellers
ರಾಜ್ಯ ವಾರ್ತೆಸ್ಥಳೀಯ

ರೀಲ್ ಸ್ಟಾರ್ ಸೋನು ಗೌಡ ಬಂಧನ! ದತ್ತು ಮಗು ಜೊತೆಗಿನ ರೀಲ್ಸ್ ಮುಳುವಾಯಿತೇ?

Karpady sri subhramanya

ಈ ಸುದ್ದಿಯನ್ನು ಶೇರ್ ಮಾಡಿ

SRK Ladders

ಬೆಂಗಳೂರು: ರೀಲ್ ಸ್ಟಾರ್, ಬಿಗ್ ಬಾಸ್ ಖ್ಯಾತಿಯ ಸೋನು ಗೌಡ ಅರೆಸ್ಟ್ ಆಗಿದ್ದಾರೆ. ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಸೋನುಳನ್ನು ಅರೆಸ್ಟ್ ಮಾಡಿದ್ದಾರೆ.

Akshaya College

ಮಗುವನ್ನು ಅಕ್ರಮವಾಗಿ ದತ್ತು ಪಡೆದ ಆರೋಪದ ಅಡಿಯಲ್ಲಿ ಸೋನು ಗೌಡ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಾನು 6 ರಿಂದ 8 ವರ್ಷದ ಸೇವಂತಿ ಅನ್ನೋ ಮಗುವನ್ನು ದತ್ತು ಪಡೆದಿರೋದಾಗಿ ರೀಲ್ ಸ್ಟಾರ್ ಸೋನು ಗೌಡ ಹೇಳಿಕೊಂಡಿದ್ದರು. ಅವರ ಹೇಳಿಕೆ ವೈರಲ್ ಕೂಡ ಆಗಿತ್ತು. ಅಲ್ಲದೇ ಆಕೆಯ ಜೊತೆಗೆ ಸಾಕಷ್ಟು ವೀಡಿಯೋಗಳನ್ನು ಸೋನು ಪೋಸ್ಟ್ ಮಾಡಿದ್ದರು.

ಈ ಹಿನ್ನಲೆಯಲ್ಲಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಎಂಬುವರು ಬ್ಯಾಡರಹಳ್ಳಿ ಠಾಣೆಗೆ ರೀಲ್ ಸ್ಟಾರ್ ಸೋನು ಗೌಡ ವಿರುದ್ಧ ದೂರು ನೀಡಿದ್ದರು. ಈ ದೂರನ್ನು ಆಧರಿಸಿ, ಸೋನು ಗೌಡ ವಿರುದ್ಧ ಜೆ.ಜೆ ಆಕ್ಟ್ ಅಡಿಯಲ್ಲಿ ಬ್ಯಾಡರಹಳ್ಳಿ ಠಾಣೆಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಆ ಬಳಿಕ ಇಂದು ಸೋನು ಗೌಡ ಅವರನ್ನು ಬಂಧಿಸಿರೋದಾಗಿ ತಿಳಿದು ಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts