ಕಾವು: ಲಯನ್ಸ್ ಕ್ಲಬ್ ಎಂದಾಗ ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದು ಇತ್ತು ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೊಂದು ಸೇವಾ ಸಂಸ್ಥೆ ಅಷ್ಟೇ ಆಗಿ ಅಲ್ಲದೆ ಆಗಿದ್ದು ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಿದಾಗಲೇ ಇದಕ್ಕೊಂದು ಅರ್ಥ ಸಿಗುತ್ತದೆ ಎಂದು ಕುಮಾರ್ ಪೆರ್ನಾಜೆ ಹೇಳಿದರು.
ಕಾವು ಸಮುದಾಯ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ಸ್ ಇದರ ಲಯನ್ಸ್ ಜಿಲ್ಲೆ 317d, 7ರ ವಲಯ ಎರಡರ ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಪ್ರಾಂತ್ಯ ಅಧ್ಯಕ್ಷರ ಅಧಿಕೃತ ಬೇಟಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮೋಹನ್ ಶೆಣೈ ಬಂಡಸಾಲೆ, ಕೆಎಸ್ಆರ್ಟಿಸಿ ನಿವೃತ್ತ ಟಿಸಿ ದಿನೇಶ್ ಗೌಡ ಹಾಗೂ ಅವರ ಪತ್ನಿಯನ್ನು ಸನ್ಮಾನಿಸಲಾಯಿತು.
ಲಯನ್ಸ್ ಕ್ಲಬ್ ಪುತ್ತೂರು ಕಾವು ಅಧ್ಯಕ್ಷ ಕೆ ಇಬ್ರಾಹಿಂ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಲಯನ್ಸ್ ಕ್ಲಬ್ ಪುತ್ತೂರು ಕಾವು ಇದರ ಸ್ಥಾಪಕ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಸನ್ಮಾನಿಸಿದರು. ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಅಧ್ಯಕ್ಷ ದಿವ್ಯನಾಥ ಶೆಟ್ಟಿ ಅವರು ಸನ್ಮಾನ ಪತ್ರವನ್ನು ವಾಚಿಸಿದರು.
ಪ್ರಾಂತ್ಯ ಅಧ್ಯಕ್ಷ ಎಂ ಆನಂದ ರೈ ಮತ್ತು ಪತ್ನಿ, ಲಯನ್ಸ್ ವಲಯ ಅಧ್ಯಕ್ಷ ಜಗನ್ನಾಥ ರೈ ಗುತ್ತು, ವಲಯ ರಾಯಭಾರಿ ರಮೇಶ್ ರೈ ಸಾಂತ್ಯ, ಕ್ಲಬ್ ಕೋಶಾಧಿಕಾರಿ ರಮೇಶ್ ಆಳ್ವ ಆಲೆಪ್ಪಾಡಿ ಗುತ್ತು, ಕ್ಲಬ್ ಕಾರ್ಯದರ್ಶಿ ದೇವಣ್ಣ ರೈ ಮುದರ್ಪಳ್ಳ ಉಪಸ್ಥಿತರಿದ್ದರು.
ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಪ್ರತಿಷ್ಠಾನ ಮಂಗಳೂರು ಘಟಕದ ಆಡಳಿತ ಮಂಡಳಿ ನಿರ್ದೇಶಕ ಜಯಪ್ರಕಾಶ್ ರೈ, ವಿಜಯ ಗ್ರಾಮೀಣ ಅಭಿವೃದ್ಧಿ ಮಂಡಳಿ ಕಾವು ಈಶ್ವರಮಂಗಲ ಘಟಕದ ಅಧ್ಯಕ್ಷ ಪಾವನ ರಾಮ ಸಹಕರಿಸಿದರು. ಸುರೇಖಾ ಡಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
























