ಉಪ್ಪಿನಂಗಡಿ: ಉಪ್ಪಿನಂಗಡಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ನೇತೃತ್ವದಲ್ಲಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ನೇತ್ರಾವತಿ ಸಭಾಂಗಣದಲ್ಲಿ 30ನೇ ವರ್ಷದ ಶ್ರೀ ವಿಶ್ವಕರ್ಮ ಪೂಜೆ ನಡೆಯಿತು.


ಮುಖ್ಯ ಅತಿಥಿಯಾಗಿದ್ದ ಪುತ್ತೂರು ಚಂದ್ರ ಫ್ಯಾನ್ಸಿ ಸ್ಟೋರ್ ಮಾಲಕ ದಿನೇಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜ ಪರಿಶ್ರಮವನ್ನೇ ನಂಬಿಕೊಂಡು ಬಂದಿರುವ ಸಮಾಜ. ರಕ್ತಗತವಾಗಿ ನಮಗೆ ಸಿಕ್ಕಿರುವ ಶ್ರಮ ಹಾಗೂ ಕೌಶಲ್ಯದಿಂದ ನಾವು ಜೀವನ ಕಟ್ಟಿಕೊಂಡು ಬಂದಿದ್ದೇವೆ. ಇದಕ್ಕೆಲ್ಲಾ ಕಾರಣಕರ್ತೃರಾದ ವಿಶ್ವಕರ್ಮ ದೇವರ ಜಯಂತಿಯಂದು ವಿಶ್ವಕರ್ಮ ಪೂಜೆಯನ್ನು ಪ್ರತಿವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದೇವೆ ಎಂದರು.
ಅತಿಥಿಗಳಾಗಿದ್ದ ಜ್ಯೋತಿ ದಿನೇಶ್ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮಾಜ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ. ಅದನ್ನೆಲ್ಲಾ ಎದುರಿಸಿ ಸಮಾಜದ ಸರ್ವತೋಮುಖ ಅಭಿವೃದ್ಧಿ ಕಡೆ ಸಾಗಬೇಕು ಎಂದರು.
ಸಂಘದ ಅಧ್ಯಕ್ಷ ಹರೀಶ್ ಆಚಾರ್ಯ ಪುಳಿತ್ತಡಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ರಾಧಾಕೃಷ್ಣ ನಾಯಕ್, ಮಹಿಳಾ ಸಂಘದ ಅಧ್ಯಕ್ಷೆ ಸೌಮ್ಯ ಆಚಾರ್ಯ ಶುಭಹಾರೈಸಿದರು.
ಕಾಷ್ಠಶಿಲ್ಪಿ ರಾಮಚಂದ್ರ ಆಚಾರ್ಯ ನೆಲ್ಯಾಡಿ ಹಾಗೂ ಯುವ ಕಲಾವಿದೆ ಸುರಕ್ಷಾ ಆಚಾರ್ಯ ಕನ್ನಾಜೆ ಅವರನ್ನು ಸನ್ಮಾನಿಸಲಾಯಿತು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪುರೋಹಿತ್ ವಿ. ಪ್ರಕಾಶ್ ಆಚಾರ್ಯ ವೇಣೂರು ಅವರ ಆಚಾರ್ಯತ್ವದಲ್ಲಿ ಶ್ರೀ ವಿಶ್ವಕರ್ಮ ಪೂಜೆ ನಡೆಯಿತು.
ರಮೇಶ್ ಆಚಾರ್ಯ ಇಳಂತಿಲ, ಪ್ರಸನ್ನ ನೂಜಿ, ರಾಮಚಂದ್ರ ಮನವಳಿಕೆ, ದಿನಕರ ಆಚಾರ್ಯ ಸುಭಾಷ್ ನಗರ, ಕಿಶೋರ್ ಆಚಾರ್ಯ ಸಿದ್ಯಾಳ, ಪುಂಡರೀಕ ಆಚಾರ್ಯ, ಹರೀಶ್ ಆಚಾರ್ಯ ಪಾದೆ, ಎನ್. ಸೀತಾರಾಮ ಆಚಾರ್ಯ, ಮಹೇಶ ನೆರೇಂಕಿ, ಮಾಧವ ಆಚಾರ್ಯ, ಕಮ್ಮಾರ ಸಂಘದ ಜಿಲ್ಲಾಧ್ಯಕ್ಷ ರಮೇಶ್ ಆಚಾರ್ಯ ಕಡೇಶ್ವಲ್ಯ, ಜಯರಾಮ್ ಆಚಾರ್ಯ ಕೊಡಿoಬಾಡಿ, ಪ್ರಶಾಂತ್ ಆಚಾರ್ಯ ಸವಣೂರು, ಸತೀಶ್ ಆಚಾರ್ಯ ಕೆಮ್ಮಾರ, ಮಹಿಳಾ ಸಂಘದ ಪ್ರಮುಖರಾದ ಸುಜಾತ ಕೃಷ್ಣ ಆಚಾರ್ಯ, ರಮ್ಯಾ ಅಶೋಕ ಆಚಾರ್ಯ, ಸುಪ್ರಿಯಾ ರಮೇಶ್ ಆಚಾರ್ಯ, ಜ್ಯೋತಿ ಮಾಧವ ಆಚಾರ್ಯ, ಸುಮಾ ಸೀತಾರಾಮ್ ಆಚಾರ್ಯ ಪೆರಿಯಡ್ಕ, ಶುಭ ಜಯರಾಮ್ ಆಚಾರ್ಯ ಕೊಡಿಯಾಡಿ, ಹೇಮಲತಾ ಜಯಪ್ರಕಾಶ್ ಆಚಾರ್ಯ, ಜಯಂತಿ ಹರೀಶ್ ಆಚಾರ್ಯ ಪುಳಿತ್ತಡಿ, ಆಶಾ ಹರೀಶ್ ಆಚಾರ್ಯ ಮದ್ದಡ್ಕ, ಯಶೋಧರ್ ನವಶ್ರೀ, ಹರೀಶ್ ಆಚಾರ್ಯ ಬಾರ್ಯ, ಸುರೇಶ್ ಆಚಾರ್ಯ ಬಿಳಿಯೂರ್, ವಿಕ್ರಂ ಬoಡಾಡಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಗಿರೀಶ್ ಸ್ವಾಗತಿಸಿದರು. ರವಿ ಇಳಂತಿಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ವಂದಿಸಿದರು.
ಮಧ್ಯಾಹ್ನದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಮಕ್ಕಳ ನೃತ್ಯ, ಪ್ರಕಾಶ್ ಹಾಗೂ ಲೊಕೇಶ್ ಸರಪಾಡಿ ಅವರ ಸಾರಥ್ಯದ ತಂಡದಿಂದ ಲೋ ಫ್ರಮ್ ಸ ಎಂಬ ಪ್ರಹಸನ, ಪ್ರಜ್ಞಾ ಆಚಾರ್ಯ ಅವರಿಂದ ಸ್ವರ ಸಮರ್ಪಣೆ ಗಾಯನ ಕಾರ್ಯಕ್ರಮ, ಗಿರೀಶ್ ಇಳಂತಿಲ ಸಾರಥ್ಯದಲ್ಲಿ ಯಾನ್ ಎನ್ನ ದೇವೆರ್ ತುಳು ಸಾಮಾಜಿಕ ನಾಟಕ ಪ್ರದರ್ಶಿಸಲ್ಪಟ್ಟಿತು.