ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿತು.
ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ತ್ಯಾಗ, ಬಲಿದಾನ ಮಾಡಿದ ಭಗತ್ ಸಿಂಗ್, ವೀರ ಸಾವರ್ಕರ್, ಸುಭಾಷ್ ಚಂದ್ರ ಬೋಸ್, ಅಹಿಂಸಾ ತತ್ವದಲ್ಲಿ ಅನೇಕ ಚಳುವಳಿಗಳ ಮೂಲಕ ಸ್ವಾತಂತ್ರ್ಯ ಸಂಗ್ರಾಮದ ಚುಕ್ಕಾಣಿ ಹಿಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸ್ವತಂತ್ರ ಭಾರತದ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಮೊದಲಾದ ಮಹನೀಯರನ್ನು ಈ ಸಂದರ್ಭದಲ್ಲಿ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದಲ್ಲಿ ಅವರ ನಿಸ್ವಾರ್ಥ ಸೇವೆ, ಅವರ ದೇಶ ಪ್ರೇಮ ನಮಗೆಲ್ಲರಿಗೂ ಆದರ್ಶ. ನನ್ನ ದೇಶ ನನ್ನ ಹೆಮ್ಮೆ ಎಂಬ ರಾಷ್ಟ್ರ ಪ್ರೇಮ, ರಾಷ್ಟ್ರ ಭಕ್ತಿಯಿಂದ, ನಮ್ಮ ರಾಷ್ಟ್ರಕ್ಕೆ ಸುರಕ್ಷತೆ ನೀಡುವ ನಮ್ಮ ಯೋಧರನ್ನು, ದೇಶಕ್ಕೆ ಅನ್ನ ನೀಡುವ ನಮ್ಮ ರೈತರನ್ನು ನಾವು ಸದಾ ಗೌರವಿಸಬೇಕು ಎಂದರು.
ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆ, ಭ್ರಷ್ಟಾಚಾರ, ಕೋಮು ಗಲಭೆಗಳು ಸಮಾಜದ ಶಾಂತಿಯುತ ಬದುಕಿಗೆ ಮಾರಕವಾಗಿದೆ . ಈ ನಿಟ್ಟಿನಲ್ಲಿ ಯುವ ಸಮೂಹ ಜಾಗೃತರಾಗಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಜಗತ್ತಿನ ಎಲ್ಲಾ ರಾಷ್ಟ್ರಗಳ ವಿಶ್ವಾಸವನ್ನು ಗಳಿಸುತ್ತಾ ಜಗತ್ತಿನ ಅತ್ಯಂತ ಶ್ರೇಷ್ಠ ನಾಯಕ ಎಂಬುವುದು ನಮ್ಮೆಲ್ಲರ ಹೆಗ್ಗಳಿಕೆ. ‘ಆಪರೇಷನ್ ಸಿಂಧೂರ್’ ನಲ್ಲಿ ಭಾರತದ ಮಿಲಿಟರಿ ಶಕ್ತಿ, ನಮ್ಮ ಯೋಧರ ತಾಕತ್ತು , ಭಾರತದ ಸಾಮರ್ಥ್ಯ ಜಗತ್ತಿಗೆ ಅರಿವಾಗಿದೆ. ನಾವೆಲ್ಲರೂ ಪಣ ತೊಟ್ಟು ದುಡಿಯ ಬೇಕಾಗಿದೆ ಎಂದು ಕರೆ ನೀಡಿದರು.
ಅಕ್ಷಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ನಮ್ಮ ಯೋಧರ ತಮ್ಮ ಜೀವವನ್ನು ಪಣಕ್ಕಿಟ್ಟು ನಮಗೆ ಸುರಕ್ಷತೆ ನೀಡುತ್ತಿರುವಾಗ ,ದೇಶದ ಒಳಗೆ ಭಯೋತ್ಪಾದನೆ ಮತ್ತು ಸಾಮಾಜಿಕ ಅಶಾಂತಿಯ ಸೃಷ್ಟಿಸುವುದು ವಿಪರ್ಯಾಸ. ಈ ಹಿನ್ನೆಲೆಯಲ್ಲಿ ಯುವ ಸಮೂಹ ಎಚ್ಚೆತ್ತು ದೇಶ ರಕ್ಷಣೆ ಮತ್ತು ಭಾರತದ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು. ನಾವು ನಮ್ಮ ಕರ್ತವ್ಯವನ್ನು ಯಥಾವತ್ತಾಗಿ ಮಾಡಿದರೆ ; ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಹಿರಿಯರನ್ನು ಗೌರವಿಸಿ , ಅವರ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಉತ್ತಮ ಕಲಿಕೆ ಮತ್ತು ಸುಸಂಸ್ಕೃತ ಜೀವನ ನಡೆಸಿದರೆ ನಮ್ಮ ಜೀವನ ಸಾರ್ಥಕ ಎಂದು ತಿಳಿಸಿದರು.
ಪ್ರಾಂಶುಪಾಲ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ. ಉಪಸ್ಥಿತರಿದ್ದರು.
ಫ್ಯಾಷನ್ ಡಿಸೈನ್ ವಿಭಾಗದ ವಿದ್ಯಾರ್ಥಿನಿಯರಾದ ಪ್ರಕೃತಿ, ರಮ್ಯಾ, ಮೋಕ್ಷ ರಾಷ್ಟ್ರಗೀತೆ ಮತ್ತು ಧ್ವಜ ಗೀತೆ ಹಾಡಿದರು. ಕಾಲೇಜಿನ ವಿದ್ಯಾರ್ಥಿ ಒಕ್ಕೂಟದ ನಾಯಕ ರಾಕೇಶ್ ಸ್ವಾಗತಿಸಿ, ವಿದ್ಯಾರ್ಥಿ ಒಕ್ಕೂಟದ ಕಾರ್ಯದರ್ಶಿ ವರ್ಷಿಣಿ ವಂದಿಸಿದರು. ಆಂತರಿಕ ವಿನ್ಯಾಸ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು.
ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 79ನೇ ಸ್ವಾತಂತ್ರ್ಯೋತ್ಸವ
What's your reaction?
Related Posts
ಸ್ಥಳಾಂತರ ಭಾಗ್ಯ ಕಳೆದುಕೊಂಡ ಪುತ್ತೂರು ಮಹಿಳಾ ಪೊಲೀಸ್ ಠಾಣೆ!!
ಬೆಂಗಳೂರು ಪುತ್ತೂರು: ಪುತ್ತೂರಿನಲ್ಲಿರುವ ಮಹಿಳಾ ಪೊಲೀಸ್ ಠಾಣೆಯನ್ನು ಪ್ರಸ್ತುತ ಸ್ಥಳದಿಂದ…
ಕಬಕ: ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಶ್ರಮದಾನ
ಕಬಕ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾಯೋಜಿತ ಶೌರ್ಯ ವಿಪತ್ತು…
ಮೆಸ್ಕಾಂನಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಮೆಸ್ಕಾಂ ಕಾರ್ಯ ಮತ್ತು ಪಾಲನಾ ಶಾಖೆ, ಪುತ್ತೂರು ನಗರ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ…
ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್’ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ
ಪುತ್ತೂರು: ಇಲ್ಲಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್'ನಲ್ಲಿ 79ನೇ ಸ್ವಾತಂತ್ರ್ಯ ದಿನವನ್ನು…
ಶಿಲ್ಪಕ್ಕೆ ಜೀವ, ಶಿಲ್ಪಿಗೆ ಜೀವನ | ಶಿವಪೇಟೆಯಲ್ಲಿ ತಯಾರಾಗುತ್ತಿವೆ ಗಣಪನ ಮೂರ್ತಿ!
ಗಣೇಶ ಚತುರ್ಥಿಗೆ ಇನ್ನು ಕೆಲ ದಿನಗಳಷ್ಟೇ ಬಾಕಿ. ಅಂದು ಹಲವು ರೀತಿಯ ಗಣಪತಿ ಮೂರ್ತಿಗಳು…
ಪುತ್ತೂರು: ಪಿಲಿಗೊಬ್ಬು-ಸೀಸನ್ 3 ಹಾಗೂ ಫುಡ್ ಫೆಸ್ಟ್ನ ಆಮಂತ್ರಣ ಪತ್ರ ಬಿಡುಗಡೆ
ಪುತ್ತೂರು: ತುಳುನಾಡಿನ ಜಾನಪದ ಕಲೆ ಹುಲಿವೇಷವನ್ನು ಉಳಿಸಿ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ…
ಸಂಗೀತಗಾರ್ತಿ ಸವಿತಾ ಕೋಡಂದೂರು ಅವರಿಗೆ ಚಂದನ ಸ್ವರ ಸಂಗೀತ ಪ್ರಶಸ್ತಿ ಪ್ರಧಾನ
ಸಂಗೀತಗಾರ್ತಿ ಸವಿತಾ ಕೋಡಂದೂರು ಅವರು ಹಲವಾರು ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಮಾಡಿರುವ ಅಪಾರ…
ಆ. 10ರಂದು ಆಟಿಡೊಂಜಿ ದಿನ, ಸಾಧಕರ ಗುರುತಿಸುವ ಕಾರ್ಯಕ್ರಮ | ನಲಿಕೆಯವರ ಸಮಾಜ ಸೇವಾ ಸಂಘ, ವಲಯ ಸಮಿತಿ, ರಾಜ್ಯ ಪಾಣಾರ, ಅಜಲ ಯಾನೆ ನಲಿಕೆಯವರ ಸಮಾಜ ಸೇವಾ ಸಂಘ ಆಯೋಜನೆ
ಪುತ್ತೂರು: ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘ, ತಾಲೂಕು ವಲಯ ಸಮಿತಿಗಳು ಹಾಗೂ ಕರ್ನಾಟಕ ರಾಜ್ಯ…
ಪುತ್ತೂರಿನ ಶೃಂಗದಲ್ಲಿ ಅರಳಿದ ತಿರಂಗಾ
ಪುತ್ತೂರು: ಮುತ್ತು ಬೆಳೆದ ಪುತ್ತೂರಿನ ಅತೀ ಎತ್ತರದ ಪ್ರದೇಶವಾದ ಬಿರುಮಲೆ ಬೆಟ್ಟದ ಶೃಂಗದಲ್ಲಿ…
ಪರ್ಲಡ್ಕ ರಸ್ತೆ ಬ್ಲಾಕ್!! ಮುಖ್ಯರಸ್ತೆ ತಪ್ಪಿಸಲು ಹೋಗಿ ಸಿಲುಕಿಕೊಂಡ ವಾಹನಗಳು!!
ಪುತ್ತೂರು: ಮುಖ್ಯರಸ್ತೆಯಿಂದ ಬೈಪಾಸ್ ಜಂಕ್ಷನ್ ಸಂಪರ್ಕಿಸುವ ಪರ್ಲಡ್ಕ ರಸ್ತೆ ಸೋಮವಾರ ಬೆಳಗ್ಗೆ…