ರಾಜ್ಯ ವಾರ್ತೆಸ್ಥಳೀಯ

ಶಿವಮೊಗ್ಗದಿಂದ ಈಶ್ವರಪ್ಪ ಬಂಡಾಯ?

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ: ಬಿಜೆಪಿ ಎರಡನೇ ಪಟ್ಟಿ ಪ್ರಕಟವಾಗುತ್ತಿದ್ದಂತೆ ಹಾವೇರಿ ಕ್ಷೇತ್ರಕ್ಕೆ ಬಸವರಾಜ್ ಬೊಮ್ಮಾಯಿ ಅವರ ಹೆಸರು ಘೋಷಣೆಯಾದುದನ್ನು ಕಂಡು ಮಾಜಿ ಸಿಎಂ ಕೆ.ಎಸ್. ಈಶ್ವರಪ್ಪ ಅವರು ಭಾರೀ ಆಕ್ರೋಶ ಹೊರ ಹಾಕಿ ಬೆಂಬಲಿಗರ ಸಭೆಯ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಘೋಷಣೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ”ಯಡಿಯೂರಪ್ಪ ಅವರು ನನಗೆ ಮೋಸ ಮಾಡಿದ್ದಾರೆ. ಕಾಂತೇಶ್ ಗೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಮಾರ್ಚ್ 15 ರಂದು ಸಂಜೆ ಶಿವಮೊಗ್ಗದಲ್ಲಿ ಬೆಂಬಲಿಗರ ಸಭೆ ನಡೆಸುತ್ತೇನೆ. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

core technologies

ನಾನು 40 ವರ್ಷ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಅದನ್ನು ಗುರುತಿಸಿ ನನ್ನ ಮಗನಿಗೆ ಟಿಕೆಟ್ ಕೊಡಬಹುದಿತ್ತು. ಸದಾನಂದ ಗೌಡ, ಸಿ.ಟಿ.ರವಿ, ಪ್ರತಾಪ್ ಸಿಂಹ ಅವರಿಗೆ ಅನ್ಯಾಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.

akshaya college

ಟಿಕೆಟ್ ಪ್ರಕಟವಾಗುತ್ತಿದ್ದಂತೆ ಹಾವೇರಿ ಟಿಕೆಟ್ ಗಾಗಿ ತೀವ್ರ ಪ್ರಯತ್ನ ನಡೆಸಿದ್ದ ಕೆ.ಈ.ಕಾಂತೇಶ್ ಇತರ ಬೆಂಬಲಿಗರೊಂದಿಗೆ ಈಶ್ವರಪ್ಪ ಅವರು ಕಾರಿನಲ್ಲಿ ಹೊರಟರು. ಫೋನ್ ಕರೆಯೊಂದು ಬರುತ್ತಿದ್ದಂತೆ ತುರ್ತಾಗಿ ಈಶ್ವರಪ್ಪ ಮತ್ತು ಕಾಂತೇಶ್ ಅವರು ತೆರಳಿದರು. ಅವರ ಮುಖದಲ್ಲಿ ತೀವ್ರ ಬೇಸರ, ಆಕ್ರೋಶ ಮನೆ ಮಾಡಿತ್ತು.

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಸಾರ್ವಜನಿಕ ಸ್ಥಳಗಳಲ್ಲಿ ಸಾಕು ನಾಯಿ ಬಿಟ್ಟರೆ ಎಚ್ಚರಿಕೆ! ಬೀದಿ ನಾಯಿಗಳಿಗೆ ಆಹಾರ ಹಾಕಲು ಜಾಗ ಗುರುತು

ಸಾಕು ನಾಯಿಯನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟರೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು…

ಉಪ್ಪಿನಂಗಡಿ: ಸೇತುವೆ ಕಾಮಗಾರಿ ವೇಳೆ ಮೊಸಳೆ ಪ್ರತ್ಯಕ್ಷ! ನದಿಗಿಳಿಯುತ್ತೀರಾದರೆ ಎಚ್ಚರ: ಹಲವೆಡೆ ಪತ್ತೆಯಾಗಿವೆ ಮೊಸಳೆ!!

ಉಪ್ಪಿನಂಗಡಿ: ಮುಗೇರಡ್ಕ ಸಮೀಪ ನೇತ್ರಾವತಿ ನದಿಯ ಮರಳಿನ ದಿಬ್ಬದಲ್ಲಿ ಮೊಸಳೆಯೊಂದು ವಿಶ್ರಾಂತಿ…

ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ! ಕುತ್ತಿಗೆಗೆ ಗಾಯವಾಗಿ ಗಂಭೀರ ಸ್ಥಿತಿಯಲ್ಲಿದ್ದ ವಾನರನ ರಕ್ಷಣೆ!!

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಗೆ ಬಂದ ಮಂಗನ ಮೇಲೆ ನಾಯಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ…

1 of 146