ಸ್ಥಳೀಯ

ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಉಷಾ ಅಂಚನ್

GL

ಈ ಸುದ್ದಿಯನ್ನು ಶೇರ್ ಮಾಡಿ

ನೆಲ್ಯಾಡಿ: ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ತಾ.ಪಂ. ಮಾಜಿ ಸದಸ್ಯೆ, ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ನೆಲ್ಯಾಡಿಯ ಉಷಾ ಅಂಚನ್ ರವರು ನೇಮಕಗೊಂಡಿದ್ದಾರೆ.

chennai-shopping
maithri

ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾ‌ರ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಜ್ಯ ಮಹಿಳಾ ಕಾಂಗ್ರೆಸ್‌ ಸಮಿತಿ ಉಸ್ತುವಾರಿಯೂ ಆಗಿರುವ ವಿಧಾನಪರಿಷತ್‌ ಸದಸ್ಯ ಮಂಜುನಾಥ ಭಂಡಾರಿಯವರ ಸೂಚನೆಯಂತೆ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಸೌಮ್ಯ ರೆಡ್ಡಿಯವರ ಶಿಫಾರಸಿನ ಮೇರೆಗೆ ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಲಾ ಲಂಬಾ ಅವರು ಈ ನೇಮಕ ಮಾಡಿದ್ದಾರೆ.

ನೆಲ್ಯಾಡಿ ಸಮೀಪದ ಕುಂಡಡ್ಕ ನಿವಾಸಿಯಾಗಿರುವ ಉಷಾ ಅಂಚನ್ ಅವರು ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದು ಜೊತೆಗೆ ಸಹಕಾರಿ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಪುತ್ತೂರು: ಮತ್ತೆ ಗಮನ ಸೆಳೆದ ರಾಷ್ಟ್ರಧ್ವಜ!! ರಾಷ್ಟ್ರಧ್ವಜ ಹಾರಾಟದ ಮಾಹಿತಿ ನೀಡಿದ್ದಾರೆ ನಗರಸಭೆ ಪೌರಾಯುಕ್ತೆ!

ಪುತ್ತೂರು: ರಾಜ್ಯದ ಮೂರನೇ ಅತೀ ದೊಡ್ಡ ರಾಷ್ಟ್ರ ಧ್ವಜ ಹಾಗೂ ತಾಲೂಕು ಕೇಂದ್ರಗಳ ಪೈಕಿ ಅತೀ…

ಇ-ಖಾತಾ, ಇ-ಸ್ವತ್ತು ವಿತರಣೆಗೆ ವೇಗ: ದಕ್ಷಿಣ ಕನ್ನಡದಲ್ಲಿ ಸಚಿವ ದಿನೇಶ್ ಗುಂಡೂರಾವ್ ಕಟ್ಟುನಿಟ್ಟಿನ ಸೂಚನೆ

ಮಂಗಳೂರು:ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯತ್‌ಗಳು ಇ-ಖಾತಾ ಮತ್ತು ಇ-ಸ್ವತ್ತುಗಳನ್ನು…

1 of 122