ಉಜಿರೆ: ಶಿವಾನಿ ಮರಿಯಾನೆ ಬಳಿಕ ಸಿಕ್ಕಾಪಟ್ಟೆ ಪ್ರಸಿದ್ಧಿಯಾಗಿದ್ದ ಧರ್ಮಸ್ಥಳದ ಆನೆಗಳ ಪೈಕಿ ಲತಾ ಹೆಸರಿನ ಆನೆ ಶುಕ್ರವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟಿದೆ.
60 ವರ್ಷ ಪ್ರಾಯದ ಲತಾ ಆನೆ, ಶಿವರಾತ್ರಿ ಶುಭದಿನದಲ್ಲೇ ಕೊನೆಯುಸಿರೆಳೆದಿದೆ. ಕಳೆದ 50 ವರ್ಷಗಳಿಂದ ಧರ್ಮಸ್ಥಳದಲ್ಲಿ ಈ ಆನರ ಸೇವೆ ಸಲ್ಲಿಸುತ್ತಿತ್ತು.
ಲತಾ ಆನೆಯನ್ನು ಕಳೆದುಕೊಂಡಿರುವ ಶಿವಾನಿ ಹಾಗೂ ಲಕ್ಷ್ಮಿ ಇಬ್ಬರು ಮಂಕಾಗಿದ್ದಾರೆ. ಆನೆ ಸಾವಿನ ಸುದ್ದಿ ತಿಳಿದು ಸುತ್ತಮುತ್ತಲ ಭಕ್ತರು ದೇವಸ್ಥಾನದ బళి ಆಗಮಿಸುತ್ತಿದ್ದಾರೆ.