ರಾಜ್ಯ ವಾರ್ತೆ

ಜೀವಂತವಿರುವ ಅಜ್ಜಿಗೆ ಮರಣ ಪ್ರಮಾಣಪತ್ರ ಸೃಷ್ಟಿಸಿ ಆಸ್ತಿ ಹಂಚಿಕೊಂಡ ಮೊಮ್ಮಕ್ಕಳು!

GL
ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು : ಆಸ್ತಿಗಾಗಿ ಮೊಮ್ಮಕ್ಕಳು ತಮ್ಮ ಅಜ್ಜಿ ಜೀವಂತವಾಗಿರುವಾಗಲೇ ಮರಣ ಪ್ರಮಾಣಪತ್ರ ಮಾಡಿಸಿ ಆಸ್ತಿ ಕಬಳಿಸಿದ್ದಾರೆ.

ಗಂಡನಿಲ್ಲದ ಮನೆಯಲ್ಲಿ ನಾನೂ ಇರುವುದು ಬೇಡವೆಂದು ಹೊರಗೆ ಬಂದು ಮಕ್ಕಳನ್ನು ಸಾಕುತ್ತಾ ಜೀವನ ಸಾಗಿಸುತ್ತಿದ್ದ ಗಂಗಮ್ಮನಿಗೆ ತನ್ನ ಗಂಡನ ಆಸ್ತಿ ಸಿಕ್ಕು ನನ್ನ ಮಕ್ಕಳಿಗೂ ಉತ್ತಮ ಭವಿಷ್ಯ ಸಿಗುತ್ತದೆ ಎಂಬ ಕನಸು ಕಾಣುತ್ತಿದ್ದಳು. ಆದರೆ, ಈ ಗಂಗಮ್ಮನ ಕನಸಿಗೆ ಸ್ವತಃ ಅವರ ಗಂಡನ ಅಣ್ಣ ಹಾಗೂ ಅವರ ಮಕ್ಕಳು ಕೊಳ್ಳಿ ಇಟ್ಟಿದ್ದಾರೆ. ಗಂಗಮ್ಮನೂ ಸತ್ತು ಹೋಗಿದ್ದಾಳೆಂದು ಸರ್ಕಾರಿ ನಕಲಿ ದಾಖಲೆಗಳನ್ನು ಮಾಡಿಸಿ, ಅವರಿಗೆ ಬರಬೇಕಿದ್ದ 11 ಎಕರೆ ಭೂಮಿಯನ್ನು ಕಬಳಿಸಿ, ಪೂರ್ಣವಾಗಿ ಬೀದಿಗೆ ತಳ್ಳಿದ್ದಾರೆ. ಇದೀಗ ಆಸ್ತಿ ಕೇಳಲು ಮಕ್ಕಳನ್ನು ಕರೆದುಕೊಂಡು ಹೋದರೆ, ಇಡೀ ಕುಟುಂಬದ ಎಲ್ಲ ಸದಸ್ಯರನ್ನೂ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ

ಸರ್ಕಾರಿ ದಾಖಲೆಗಳಲ್ಲಿ ಅಜ್ಜಿ ಸತ್ತಿದ್ದಾರೆ ಎಂದು ದಾಖಲಿಸಿ, ಅಕೆಯನ್ನು ಆಸ್ತಿಯಿಂದ ವಂಚಿತಳನ್ನಾಗಿ ಮಾಡಿದ್ದಾರೆ. ಇದರಿಂದಾಗಿ ಅಜ್ಜಿ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts