ಈಜಲು ತೆರಳಿದ್ದ ಬೆಂಗಳೂರಿನ ಇಬ್ಬರು ಯುವಕರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಬೀಜಾಡಿಯಲ್ಲಿ ಸಂಭವಿಸಿದೆ.
ಸ್ನೇಹಿತನ ಮನೆಯ ಶುಭ ಕಾರ್ಯಕ್ಕೆಂದು ತೆರಳಿದ್ದ ನಾಲೈದು ಯುವಕರ ಗುಂಪು ಬೀಜಾಡಿಯ ರೆಸಾರ್ಟ್‌ನಲ್ಲಿ ವಾಸ್ತವ್ಯ ಮಾಡಿತ್ತು.
ಮರುದಿನ ಈ ಯುವಕರ ತಂಡ ಬೀಜಾಡಿ ಸಮುದ್ರಕ್ಕೆ ತೆರಳಿದೆ. ಈ ವೇಳೆ ಸಮುದ್ರದಲ್ಲಿ ಈಜಲು ಹೋದ 4-5 ಯುವಕರ ಪೈಕಿ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಓರ್ವನ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವನ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದೆ.