tamanvi
ರಾಜ್ಯ ವಾರ್ತೆ

ಕೆಎಸ್ಆರ್ಟಿಸಿ ಬಸ್’ಗಳಲ್ಲಿ ಲಗೇಜ್ ದರ ಏರಿಕೆ: ಇಂದಿನಿಂದ ಹೊಸ ಶುಲ್ಕ ಜಾರಿ

D_shiva_bhat

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಲ್ಲದೆ ಸಾಗಿಸುವ ಲಗೇಜ್‌ಗಳಿಗೆ ನೂತನ ಪರಿಷ್ಕೃತ ದರ ಜಾರಿಗೊಳಿಸಲಾಗಿದೆ.

ಫೆಬ್ರವರಿ 16ರಿಂದ ಈ ಹೊಸ ಶುಲ್ಕಗಳು ಅನ್ವಯವಾಗಲಿವೆ ಎಂದು ನಿಗಮದ ಅಧಿಕಾರಿಗಳು ಪ್ರಕಟಣೆ ಮೂಲಕ ತಿಳಿಸಿದ್ದಾರೆ.ಡಿಸೇಲ್ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಹಾಗೂ ಇತರೆ ನಿರ್ವಹಣಾ ಖರ್ಚುಗಳ ಹೆಚ್ಚಳದ ಹಿನ್ನೆಲೆ ಲಗೇಜ್ ದರವನ್ನು ಪರಿಷ್ಕರಿಸಲಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. 2021ರಲ್ಲಿ ಕೊನೆಯ ಬಾರಿ ಲಗೇಜ್ ದರ ಏರಿಕೆಯಾಗಿತ್ತು. ಬಳಿಕ ಟಿಕೆಟ್ ದರದಲ್ಲಿ ಬದಲಾವಣೆ ನಡೆದಿದ್ದರೂ ಲಗೇಜ್ ಶುಲ್ಕವನ್ನು ಪರಿಷ್ಕರಿಸಿರಲಿಲ್ಲ. ಈ ಕಾರಣದಿಂದ ಇದೀಗ ಹೊಸ ದರಗಳನ್ನುಜಾರಿಗೊಳಿಸಲಾಗಿದೆ ಎಂದು ತಿಳಿಸಲಾಗಿದೆ.

ಪರಿಷ್ಕೃತ ಲಗೇಜ್ ದರ ವಿವರ:

1ರಿಂದ 5 ಸ್ಟೇಜ್‌ಗಳವರೆಗೆ: ₹6

6ರಿಂದ 12 ಸ್ಟೇಜ್‌ಗಳವರೆಗೆ: ₹12

156ರಿಂದ 160 ಸ್ಟೇಜ್‌ಗಳವರೆಗೆ: ₹145

ಇತ್ತೀಚೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್ ದರ ಏರಿಕೆ ಕುರಿತಂತೆ ಸುದ್ದಿಗಳು ಹರಿದಾಡಿದ್ದವು. ಆದರೆ ನಿಗಮವು ಯಾವುದೇ ಟಿಕೆಟ್ ದರ ಹೆಚ್ಚಳ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿತ್ತು. ಇದೀಗ ಕೇವಲ ಲಗೇಜ್ ಸಾಗಾಣಿಕೆ ಶುಲ್ಕಕ್ಕೆ ಮಾತ್ರ ಪರಿಷ್ಕೃತ ದರ ಜಾರಿಯಾಗುತ್ತಿದೆ.ಪ್ರಯಾಣಿಕರು ಹಾಗೂ ಸರಕು ಸಾಗಾಣಿಕೆದಾರರು ನೂತನ ದರಗಳ ಕುರಿತು ಗಮನಹರಿಸುವಂತೆ ನಿಗಮ ಮನವಿ ಮಾಡಿದೆ.


ಈ ಸುದ್ದಿಯನ್ನು ಶೇರ್ ಮಾಡಿ

What's your reaction?

Related Posts