ರಾಜ್ಯ ವಾರ್ತೆ

5ರ ಬಾಲಕಿ ಮೇಲೆ ಮಸೀದಿ ಮೌಲ್ವಿಯಿಂದ ಅತ್ಯಾಚಾರ: ಬಂಧನ!!

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ5 ವರ್ಷದ ಬಾಲಕಿಯನ್ನು ಅತ್ಯಾಚಾರ ಎಸಗಿದ ಬೆಳಗಾವಿಯ ಮಹಾಲಿಂಗಪುರ ಮಸೀದಿಯ ಮೌಲ್ವಿಯನ್ನು ಬಂಧಿಸಲಾಗಿದೆ.

Shani-pooja

2023ರ ಅಕ್ಟೋಬರ್ ನಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯ ವೈರಲ್ ಆದ ಬೆನ್ನಲ್ಲೇ, ಬಾಲಕಿ ಪೋಷಕರನ್ನು ಪತ್ತೆ ಹಚ್ಚಿ, ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಹಾಲಿಂಗಪುರದ ಮೌಲ್ವಿ ತುಫೇಲ್ ಅಹ್ಮದ್ ದಾದಾಪೀರ್​​ (22) ಎಂಬಾತನನ್ನು ಬಂಧಿಸಿರುವ ಮುರಗೋಡ ಪೊಲೀಸರು, ಹಿಂಡಲಗಾ ಜೈಲಿಗಟ್ಟಿದ್ದಾರೆ.

ಘಟನೆ ನಡೆದು ಎರಡು ವರ್ಷ ಕಳೆದರೂ ಭಯ ಪಟ್ಟು ಬಾಲಕಿ ಪೋಷಕರು ಕೇಸ್ ನೀಡಿರಲಿಲ್ಲ. ವಿಡಿಯೋ ಸಿಗುತ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಯ ಮನವೊಲಿಸಿ ಕೇಸ್ ದಾಖಲಿಸಿದ್ದಾರೆ.

ಪುನೀತ್ ಕೆರೆಹಳ್ಳಿ ಎಂಬ ಎಕ್ಸ್​ ಖಾತೆಯಲ್ಲಿ ವಿಡಿಯೋ ವೈರಲ್​ ಆಗಿತ್ತು. 2023 ಅಕ್ಟೋಬರ್​ 5ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯ ಮಸೀದಿ ಒಂದರಲ್ಲಿ ಹೆಣ್ಣು ಮಗುವಿನ ಮೇಲೆ ನಡೆದಿರುವ ಈ ಅತ್ಯಾಚಾರಕ್ಕೆ ಆ ಮಗುವಿನ ತಂದೆ ನ್ಯಾಯ ಕೇಳುತ್ತಿದ್ದಾರೆ. ಮಸೀದಿಯವರು ಇವರನ್ನು ಹೆದರಿಸಿ ದೂರು ಕೊಡದಂತೆ ತಡೆದಿದ್ದಾರಂತೆ. ಈಗಲು ಆ ವ್ಯಕ್ತಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ದಯವಿಟ್ಟು ಕೂಡಲೇ ತನಿಖೆ ಮಾಡಿ ಕ್ರಮ ಜರುಗಿಸಿ ಆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ ಎಂದಿತ್ತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ದುಬೈ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕನ್ನಡಿಗರು ಸುರಕ್ಷಿತವಾಗಿ ಬೆಂಗಳೂರಿಗೆ ವಾಪಾಸ್‌

ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಸಂಘರ್ಷದ ಪರಿಣಾಮವಾಗಿ…