ರಾಜ್ಯ ವಾರ್ತೆ

ಒಲ್ಲದ ಮದುವೆ, ನಿಲ್ಲದ ಪ್ರೇಮ | ತಾಳಿ ಕಟ್ಟೋ ವೇಳೆ ಮುರಿದ ಮದುವೆ, ಸಂಜೆಗೆ ಪ್ರೇಮಿ ಜೊತೆ ನೆರವೇರಿತು

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಮೂರು ತಿಂಗಳ ಹಿಂದೆ ನಿಶ್ಚಯವಾಗಿ ಇಂದು ನಡೆಯಬೇಕಿದ್ದ ಮದುವೆಯನ್ನು ತಾಳಿ ಕಟ್ಟುವ ವೇಳೆ ಮದುವೆ ಮುರಿದುಕೊಂಡಿದ್ದ ವಧುವಿಗೆ ಆಕೆಯ ಪ್ರಿಯಕರನ ಜೊತೆಯೇ ಮಾಡುವೆ ಮಾಡಿಸಲಾಗಿದೆ.

akshaya college

ಶುಭ ಮುಹೂರ್ತದಲ್ಲಿ ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ನನಗೆ ಈ ಮದುವೆ ಇಷ್ಟ ಇಲ್ಲ ಅಂತ ಹೇಳಿದ್ದು ಮದುವೆ ಮುರಿದುಬಿದ್ದಿತ್ತು.

ಗರಬಡಿದಂತೆ ನಿಂತಿದ್ದ ವರ:

ಹಾಸನದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿತ್ತು. ಮದುವೆ ಮುಹೂರ್ತಕ್ಕೂ ಮುನ್ನ ಯುವತಿಗೆ ಆಕೆಯ ಪ್ರಿಯಕರ ಕರೆ ಮಾಡಿದ್ದನು. ಆದಾದ ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ವಧು ತೀವ್ರ ವಿರೋಧ ವ್ಯಕ್ತಪಡಿಸಿದ್ದಾಳೆ. ಈ ಘಟನೆ ವರನಿಗೆ ಆಘಾತ ತಂದಿದ್ದು ಮಾಂಗಲ್ಯಸರವನ್ನು ಕೈಯಲ್ಲೇ ಹಿಡಿದು ಗರಬಡಿದವನಂತೆ ನಿಂತಿದ್ದನು. ಇನ್ನು ತಮ್ಮ ಮಗಳ ಮನವೊಲಿಸಲು ಪೋಷಕರು, ಸಂಬಂಧಿಕರು ಎಷ್ಟೇ ಪ್ರಯತ್ನಿಸಿದರು. ಇದಕ್ಕೆ ವಧುವಿನ ಮನಸ್ಸು ಕರಗಲಿಲ್ಲ.

ಇದನ್ನು ನೋಡಿದ ವರ ಕೂಡ ಕೊನೆಗೆ ನನಗೆ ಈ ಮದುವೆ ಬೇಡ ಎಂದು ಕಣ್ಣೀರು ಹಾಕಿದ್ದಾನೆ. ಗದ್ದಲ ಗಲಾಟೆ ನಡುವೆ ಮದುವೆಯೇ ನಿಂತು ಹೋಗಿದ್ದು ಪೊಲೀಸರ ಮಧ್ಯಸ್ಥಿತಿಕೆಯಲ್ಲಿ ರಾಜಿ ಸಂಧಾನ ನಡೆಯಿತು. ಮೂರು ತಿಂಗಳ ಮುಂಚೆಯೇ ಮದುವೆ ನಿಶ್ಚಯವಾಗಿತ್ತು. ಆದರೂ ವಧು ಕೊನೆಯ ಕ್ಷಣದಲ್ಲಿ ತನಗೆ ಮದುವೆ ಬೇಡ ಎಂದು ಹೇಳಿದ್ದರ ವಿರುದ್ಧ ವರನ ಕಡೆಯವರು ಅಸಮಾಧಾನ ಹೊರಹಾಕಿದ್ದರು.

ನಂತರದ ಬೆಳವಣಿಗೆಯಲ್ಲಿ ವಧು ತಾನು ಪ್ರೀತಿಸುತ್ತಿದ್ದ ಯುವಕನಿಗಾಗಿ ಮದುವೆ ಆಗಲು ನಿರಾಕರಿಸಿದ್ದ ವಿಚಾರ ತಿಳಿದುಕೊಂಡ ಪೋಷಕರು, ತಮ್ಮ ಮಗಳ ಇಷ್ಟದಂತೆ ಪ್ರಿಯಕರ ರಘು ಜೊತೆ ಪಲ್ಲವಿಯ ಮದುವೆಯನ್ನು ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿರುವ ಗಣಪತಿ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts