pashupathi
ವಿಶೇಷ

ಮತ್ತೆ ಕೇರಳದ ಮಲತಾಯಿ ಧೋರಣೆ!! ಮಲಯಾಳಂ ಕಲಿಕೆ ಕಡ್ಡಾಯಕ್ಕೆ ಬೆದರಿದ ಗಡಿನಾಡು!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ಕೇರಳ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಯಿಂದ 10 ನೇ ತರಗತಿವರೆಗೆ ವಿದ್ಯಾರ್ಥಿಗಳಿಗೆ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆಗೆ ಕೇರಳ ವಿಧಾನಸಭೆ ಅನುಮೋದನೆ ನೀಡಿದೆ. ಪ್ರಸ್ತಾವಿತ ಮಸೂದೆ ಗಡಿ ಭಾಗದ ಕನ್ನಡಿಗರಲ್ಲಿ ತೀವ್ರ ಅಸಮಾಧಾನ, ಬೇಸರ ಹುಟ್ಟಿಸಿದೆ.

akshaya college

ವಿಧೇಯಕದಲ್ಲಿ ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯನ್ನು ಹೊರತುಪಡಿಸಲಾಗಿದೆ ಎನ್ನುವ ಉಲ್ಲೇಖವಿಲ್ಲ. ಆದ್ದರಿಂದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕಲಿಯುವ ಕನ್ನಡ ವಿದ್ಯಾರ್ಥಿಗಳಿಗೆ ಆಯ್ಕೆಯ ಅವಕಾಶ ಇರದು.ಇತರ ರಾಜ್ಯಗಳಲ್ಲಿ ಕಲಿತು 9 ಅಥವಾ 10 ನೇ ತರಗತಿಗೆ ಕೇರಳದ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳಿಗೆ ಪ್ರಸ್ತಾವಿತ ವಿಧೇಯಕದಿಂದ ವಿನಾಯಿತಿ ಒದಗಿಸಲಾಗಿದೆ. ಅಂತಹ ವಿದ್ಯಾರ್ಥಿಗಳು ಅಪೇಕ್ಷೆ ಪಟ್ಟರೆ ಮಲಯಾಳಂ ಕಲಿಯಬಹುದು.ಮಲಯಾಳಂ ಭಾಷೆಗೆ ಪ್ರತ್ಯೇಕ ಇಲಾಖೆ, ಸಚಿವರು ಮತ್ತು ನಿರ್ದೇಶನಾಲಯ ಆರಂಭಿಸುವ ವಿಷಯ ವನ್ನೂವಿಧೇಯಕ ಒಳಗೊಂಡಿದೆ.

ತಿರುವನಂತಪುರದ ಸೆಕ್ರೆಟರಿಯೇಟ್ ನ ಆಡಳಿತ ಸುಧಾರಣೆ ಇಲಾಖೆಯ ಹೆಸರನ್ನು ಇನ್ನು ಮಲಯಾಳಂ ಅಭಿವೃದ್ಧಿ ಇಲಾಖೆ ಎಂದು ಬದಲಾಯಿಸುವುದು, ಹೈಕೋರ್ಟ್ ಅನುಮತಿ ಪಡೆದು ಜಿಲ್ಲಾ ನ್ಯಾಯಾಲಯದಿಂದ ಕೆಳ ನ್ಯಾಯಾಲಯ ತನಕ ಎಲ್ಲ ತೀರ್ಪು, ವ್ಯವಹಾರಗಳನ್ನು ಮಲಯಾಳಂ ಭಾಷೆಯಲ್ಲಿ ನಡೆಸುವುದು, ರಾಜ್ಯ ಸರಕಾರದ ಆದೇಶ, ಅಧಿಸೂಚನೆ, ನಿಬಂಧನೆ, ಮಸೂದೆ, ಕಾನೂನು, ಆದೇಶ, ಪ್ರಕಟನೆಗಳನ್ನು ಮಲಯಾಳದಲ್ಲೇ ಹೊರಡಿಸಲು ತೀರ್ಮಾನಿಸಲಾಗಿದೆ.

ಶಿಕ್ಷಣದಲ್ಲಿ ಮಲಯಾಳ ಕಲಿಕೆಯನ್ನು ಕಡ್ಡಾಯಗೊಳಿಸುವ ಮಸೂದೆಗೆ ಕೇರಳ ವಿಧಾನಸಭೆ 2015ರಲ್ಲೇ ಅನುಮೋದನೆ ನೀಡಿತ್ತು. ಆದರೆ ರಾಷ್ಟ್ರಪತಿಯವರು ಅಂಗೀಕರಿಸಿರಲಿಲ್ಲ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts