ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರಿಗೆ ಪುತ್ತೂರು ರೋಟರ್ಯಾಕ್ಟ್ ಕ್ಲಬ್’ನಿಂದ ಸನ್ಮಾನಿಸಲಾಯಿತು.
ಕ್ಲಬ್ ವತಿಯಿಂದ ದೇವಸ್ಥಾನ ಆವರಣದಲ್ಲಿ ಸ್ವಚ್ಛತೆ ನಡೆಸಿ, ಬಳಿಕ ದೇವಳದ ಕಚೇರಿಯಲ್ಲಿ ಸನ್ಮಾನಿಸಲಾಯಿತು.
ವ್ಯವಸ್ಥಾಪನಾ ಸಮಿತಿಯ ವಿನಯ್, ಪುತ್ತೂರು ರೋಟರಿ ಕ್ಲಬ್ ನ ಸುಜಿತ್ ಡಿ. ರೈ, ಚಿದಾನಂದ ಬೈಲಾಡಿ, ಪುತ್ತೂರು ರೋಟರ್ಯಾಕ್ಟ್ ಕ್ಲಬ್ ಸಭಾಪತಿ ಕಿಶನ್ ಬಿ.ವಿ., ಕ್ಲಬ್ ಅಧ್ಯಕ್ಷ ವಿನಿತ್ ಹಾಗೂ ಪದಾಧಿಕಾರಿಗಳು, ಸದಸ್ಯರು, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ರೋಟರ್ಯಾಕ್ಟ್ ಕ್ಪಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

























