Gl jewellers
ಧಾರ್ಮಿಕ

ಮಾ. 12, 13ರಂದು ಕೋಟಿ – ಚೆನ್ನಯರು ನಡೆದಾಡಿದ ಕರ್ನಪ್ಪಾಡಿ ಗರಡಿಯಲ್ಲಿ ವಾರ್ಷಿಕ ನೇಮೋತ್ಸವ

ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ವತಿಯಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.12 ಮತ್ತು 13ರಂದು ನಡೆಯಲಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಿಡ್ಪಳ್ಳಿ ಕರ್ನಪ್ಪಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಸೇವಾ ಸಮಿತಿ ವತಿಯಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.12 ಮತ್ತು 13ರಂದು ನಡೆಯಲಿದೆ.

Papemajalu garady
Karnapady garady

ಸುಮಾರು 5 ಶತಮಾನಗಳ ಹಿಂದೆ ದೇಯಿ ಬೈದೆತಿಯ ಅವಳಿ ಪುತ್ರರತ್ನರಾದ ಕೋಟಿ – ಚೆನ್ನಯರು ನಡೆ ನುಡಿಗಳನ್ನು ಆಡಿದ ಪುಣ್ಯದ ನೆಲವೇ ಕರ್ನಪ್ಪಾಡಿ.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಅವರ ಅಧ್ಯಕ್ಷತೆಯಲ್ಲಿ ಕರ್ನಪ್ಪಾಡಿ ಮನೆಯವರು ಹಾಗೂ ಗರಡಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಬಹಳ ವಿಜೃಂಭಣೆಯಿಂದ ನೇಮೋತ್ಸವ ನಡೆಯುತ್ತಿದ್ದು, ಊರ ಪರವೂರ ಭಕ್ತಾದಿಗಳು ಜತಗೆ ಎಲ್ಲ ಧರ್ಮದವರು ಒಟ್ಟಾಗಿ ಭಾಗವಹಿಸುವುದು ಇಲ್ಲಿನ ವಿಶೇಷತೆ. ಪರಸ್ಪರ ಸಹಕಾರ ಮನೋಭಾವದಿಂದ ನಡೆಯುತ್ತಿರುವ ನೇಮೋತ್ಸವ, ಗ್ರಾಮದ ಜಾತ್ರೋತ್ಸವ ಎಂದೇ ಪ್ರಸಿದ್ಧಿ ಹೊಂದಿದೆ.

ಮಾ.12ರಂದು ಬೆಳಗ್ಗೆ ಗಂಟೆ 10ರಿಂದ ಗಣಪತಿ ಹೋಮ, ಬ್ರಹ್ಮರ ತಂಬಿಲ ಮತ್ತು ನಾಗ ತಂಬಿಲ ನಡೆಯಲಿದೆ.
ಸಂಜೆ ಗಂಟೆ 6ರಿಂದ ಭಜನಾ ಕಾರ್ಯಕ್ರಮ, 7ಕ್ಕೆ ಭಂಡಾರ ತೆಗೆದು ಕೊಡಮಂತಾಯ ದೈವದ ನೇಮ ನಡೆಯಲಿರುವುದು.

ಮಾ.13ರಂದು ಸಂಜೆ ಗಂಟೆ 5ಕ್ಕೆ ಹೋಮ, ಗಂಟೆ 6ರಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ ಗಂಟೆ 8ಕ್ಕೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 10 ಕ್ಕೆ ಬೈದೇರುಗಳ ಗರಡಿ ಇಳಿಯುವುದು, ರಾತ್ರಿ 2ಕ್ಕೆ ಕಿನ್ನಿದಾರು ಗರಡಿ ಇಳಿಯುವುದು. ಪ್ರಾತಃಕಾಲ ಗಂಟೆ 4 ಕ್ಕೆ ದರ್ಶನ ಪಾತ್ರಿಗಳ ಸೇಟ್, ಬೈದೇರುಗಳ ಸೇಟ್ ನಡೆಯಲಿದೆ. ಮಾ. 14ರಂದು ಬೆಳಗ್ಗೆ ಗಂಟೆ 6ಕ್ಕೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಸೇವಾ ಸಮಿತಿ ಅಧ್ಯಕ್ಷ ಎನ್.ಶಿವಪ್ಪ ಪೂಜಾರಿ ನುಳಿಯಾಲು ಮತ್ತು ಸಮಿತಿ ಸದಸ್ಯರು ಹಾಗೂ ಕರ್ನಪ್ಪಾಡಿ ಮನೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts