pashupathi
ರಾಜಕೀಯ

ದೆಹಲಿಯಲ್ಲಿ ಬಿಜೆಪಿ ಗೆಲುವು: ಸಂಟ್ಯಾರಿನಲ್ಲಿ ಸಂಭ್ರಮಾಚರಣೆ | ಭ್ರಷ್ಟಾಚಾರದ ಹೋರಾಟದಿಂದ ಬಂದ ಆಪ್, ಭ್ರಷ್ಟಾಚಾರದಿಂದಾಗಿಯೇ ಸೋತಿದೆ: ಯತೀಶ್ ದೇವ

tv clinic
47 ಸೀಟುಗಳನ್ನು ಪಡೆದುಕೊಂಡ ಬಿಜೆಪಿ ದೆಹಲಿಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಟ್ಯಾರ್ ಜಂಕ್ಷನಲ್ಲಿ ಸಂಭ್ರಮಾಚರಣೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: 47 ಸೀಟುಗಳನ್ನು ಪಡೆದುಕೊಂಡ ಬಿಜೆಪಿ ದೆಹಲಿಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಂಟ್ಯಾರ್ ಜಂಕ್ಷನಲ್ಲಿ ಸಂಭ್ರಮಾಚರಣೆ ನಡೆಯಿತು.

akshaya college

ಆರ್ಯಾಪು ಗ್ರಾಪಂ ಸದಸ್ಯ ಯತೀಶ್ ದೇವ ಮಾತನಾಡಿ, ಭ್ರಷ್ಟಾಚಾರದ ಹೋರಾಟದಿಂದ ಅಧಿಕಾರ ಪಡೆದುಕೊಂಡಿದ್ದ ಆಮ್ ಆದ್ಮಿ ಪಕ್ಷ, ಇಂದು ಭ್ರಷ್ಟಾಚಾರದ ಕಾರಣಕ್ಕೆ ಅಧಿಕಾರ ಕಳೆದುಕೊಂಡಿದೆ. 60 ಕ್ಷೇತ್ರಗಳ ದೆಹಲಿಯಲ್ಲಿ 47 ಸೀಟುಗಳನ್ನು ಬಿಜೆಪಿ ಪಡೆದುಕೊಂಡಿದ್ದರೆ, ಅಧಿಕಾರದಲ್ಲಿದ್ದ ಆಮ್ ಆದ್ಮಿ 23 ಸೀಟುಗಳಿಗಷ್ಟೇ ತೃಪ್ತಿ ಪಟ್ಟುಕೊಂಡಿದೆ. ಹಾಗಾಗಿ ದೇಶದ ಶಕ್ತಿ ಕೇಂದ್ರವಾಗಿರುವ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು.

ಇದನ್ನು ಓದಿ: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಸಂದರ್ಶನ

ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಮ್ ಸಮಿತಿ ಸದಸ್ಯ ನಿತೀಶ್ ಶಾಂತಿವನ ಮಾತನಾಡಿ, ದೆಹಲಿಯಲ್ಲೂ ಬಿಜೆಪಿ ಪರವಾದ ಅಲೆ ಇದೆ. ಅಧಿಕಾರದಲ್ಲಿದ್ದ ಆಮ್ ಆದ್ಮಿ ಕೇವಲ 23 ಸೀಟುಗಳಿಗೆ ಕುಸಿದಿರುವುದೇ ಇದಕ್ಕೆ ಸಾಕ್ಷಿ. ದೇಶದ ರಾಜಧಾನಿಯಾದ ದೆಹಲಿಯಲ್ಲಿ ಬಿಜೆಪಿ ಅಧಿಕಾರ ಪಡೆದಿರುವುದು ಕಾರ್ಯಕರ್ತರಿಗೆ, ಮುಖಂಡರಿಗೆ ಸಂಭ್ರಮದ ವಿಷಯ ಎಂದರು.

ಪ್ರಶಾಂತ್ ಆಚಾರ್ಯ, ಒಳಮೊಗ್ರು ಕೃಷಿ ಪತ್ತಿನ ಸಹಕಾರಿ ಸಂಘ ನಿರ್ದೇಶಕ ಅಮರನಾಥ, ದಕ್ಷಿಣ ಕನ್ನಡ ಜಿಲ್ಲಾ ಟೆಲಿಕಾಮ್ ಸಮಿತಿ ಸದಸ್ಯರಾದ ನಿತೀಶ್ ಶಾಂತಿವನ, ಬಿಜೆಪಿ ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬೀಜತ್ರೆ, ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಹರೀಶ್ ನಾಯಕ್ ಬಳಕ್ಕ, ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗು ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕ ಗಣೇಶ್ ರೈ ಮೂಲೆ, 113 ಬೂತ್ ಸಮಿತಿಯ ಅಧ್ಯಕ್ಷರಾದ ಶಶಿಧರ ಮರಿಕೆ, ನಿಕಟ ಪೂರ್ವ ಬೂತ್ ಕಾರ್ಯದರ್ಶಿ ರಾಮಚಂದ್ರ ಬಳಕ್ಕ, ವೆಂಕಟೇಶ್ ಕಾಮತ್, ಚೆನ್ನಪ್ಪ ಪರನೀರ್, ನವೀನ ರೈ ಕೈಕಾರ, ಪರನೀರ್ ರಾಮಣ್ಣ ಗೌಡ ಮೊದಲಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

ಪಟಾಕಿ ಸಿಡಿಸಿ, ಸಿಹಿ ತಿಂಡಿ ವಿತರಿಸಿ ಸಂಭ್ರಮಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವ್ಹೀಲ್ ಚೇರಿನಲ್ಲಿ ವಿಧಾನಸಭೆ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ! ಅಷ್ಟಕ್ಕೂ ಸಿಎಂಗೇನಾಯ್ತು?

ಇಂದಿನಿಂದ ವಿಧಾನಸಭೆ ಅಧಿವೇಶನ. ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಟ್‌ ಚೇರಿನಲ್ಲಿ…