ರಾಜಕೀಯ

ಕಚೇರಿಗೆ ಕರೆಸಿ ಶಿಕ್ಷಕಿಗೆ ಅವಮಾನ: ಶಾಸಕ ಅಶೋಕ್ ಕುಮಾರ್ ರೈ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದ ಬಿಜೆಪಿ! ನಡೆಯದ ಘಟನೆಯನ್ನು ನಡೆದಿದೆ ಎಂಬಂತೆ ಬಿಂಬಿಸಿರುವುದು ಬೇಸರದ ಸಂಗತಿ: ಬಡಗನ್ನೂರು ಗ್ರಾ.ಪಂ ಸದಸ್ಯ ಸಂತೋಷ್

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಡಗನ್ನೂರಿನ ಕೊಯಿಲ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಶಾಸಕರನ್ನು ನಿಂದಿಸಿದ ಘಟನೆಯೇ ನಡೆದಿಲ್ಲ. ಹಾಗಿದ್ದು ಶಿಕ್ಷಕಿಯನ್ನು ಕಚೇರಿಗೆ ಕರೆಸಿ ಅವಮಾನಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರ ನಡೆ ಗೂಂಡಾ ವರ್ತನೆಯನ್ನು ತೋರಿಸುತ್ತದೆ. ಶಾಸಕರು ಕ್ಷಮೆಯಾಚಿಸಬೇಕು ಎಂದು ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ್ ಉಜಿರೆಮಾರು ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 30 ವರ್ಷ ಕೆಲಸ ನಿರ್ವಹಿಸಿ ಅನುಭವ ಇರುವ ಶಿಕ್ಷಕಿಯ ವಿರುದ್ದ ಶಾಸಕರಾಗಿ ಎರಡೂವರೆ ವರ್ಷದ ಸಮಯದಲ್ಲಿ ಪುತ್ತೂರು ಶಾಸಕರ ದುವರ್ತನೆ ಸರಿಯಲ್ಲ. ಅವರ ನಾಲಿಗೆಯಿಂದ ಬಂದಿರುವ ಮಾತುಗಳನ್ನು ನೋಡಿದಾಗ ತಾನೊಬ್ಬ ಜನರಿಂದ ಆಯ್ಕೆಯಾದ ಶಾಸಕ ಎಂಬುದನ್ನು ಮರೆತಂತಿದೆ. ಶಾಸಕರ ಈ ನಡೆಯಿಂದ ಶಿಕ್ಷಕಿಗೆ ತುಂಬಾ ನೋವಾಗಿದೆ ಎಂದರು.

ಒಂದು ಸುಸಂಸ್ಕೃತ ಕುಟುಂಬದಲ್ಲಿ ಬೆಳೆದು ಬಂದಿರುವ ಪುತ್ತೂರಿನ ಶಾಸಕರ ಇತ್ತೀಚಿಗಿನ ನಡವಳಿಕೆ ಮತ್ತು ಅವರ ನಾಲಿಗೆಯಂದ ಬರುವ ಮಾತುಗಳನ್ನು ನೋಡುವಾಗ ತಾನೊಬ್ಬ ಜನರಿಂದ ಆಯ್ಕೆಯಾದ ಶಾಸಕ ಎಂಬುದನ್ನು ಮರೆತಂತಿದೆ. ಇದರಿಂದಾಗಿ ಪುತ್ತೂರಿನಲ್ಲಿ ಈ ಹಿಂದೆ ಕಾಂಗ್ರೆಸ್ ಅವಧಿಯಲ್ಲಿ ಇದ್ದಂತಹ ಗೂಂಡಾ ಸಂಸ್ಕೃತಿಯನ್ನು ಕ್ಷೇತ್ರದಲ್ಲಿ ಮತ್ತೆ ಪುನರ್ ಸ್ಥಾಪಿಸಲು ಹೊರಟಂತೆ ಕಾಣುತ್ತಿದೆ. ಬಡಗನ್ನೂರು ಪಂಚಾಯತ್ ವ್ಯಾಪ್ತಿಯ ಕೊಯಿಲ ಶಾಲೆಯ ಕಾರ್ಯಕ್ರಮದಲ್ಲಿ ತನಗೆ ಅವಮಾನಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡುವುದರ ಮೂಲಕ ಅಲ್ಲಿನ ಶಿಕ್ಷಕಿಯೊಬ್ಬರಿಗೆ ಕಾಂಗ್ರೆಸ್ ನಾಯಕರ ಎದುರೇ ಬಾಯಿಗೆ ಬಂದಂತೆ ಮಾತನಾಡಿರುವುದು ಸರಿಯಲ್ಲ. ಒಂದು ಕಡೆ 10 ಮಹಿಳೆಯರು ಸೇರಿದ ವೇದಿಕೆಯಲ್ಲಿ ಮಹಿಳೆಯರನ್ನು ದೇವರೆಂದು ಸಂಬೋಧಿಸುವುದು ಮತ್ತೊಂದು ಕಡೆ ಮಹಿಳೆಯರನ್ನು ಅವಮಾನಿಸುವುದು ನೋಡುವಾಗ ಶಾಸಕರಿಗೆ ಮಹಿಳೆಯ ಮೇಲಿರುವಂತಹ ಗೌರವ ಕೇವಲ ವೇದಿಕೆಗೆ ಸೀಮಿತವಾಗಿದೆ ಎಂಬುದು ಕಾಣುತ್ತಿದೆ. ಇದಕ್ಕೆ ಮುಂದಿನ ದಿನ ಸಜ್ಜನರು ತಕ್ಕ ಉತ್ತರ ಕೊಡಲಿದ್ದಾರೆ ಎಂದ ಅವರು ಶಾಸಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.

ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಬಿಜತ್ರೆ ಮಾತನಾಡಿ, ಶಾಸಕರಾಗಿ ಎರಡೂವರೆ ವರ್ಷದಲ್ಲಿ ಅವರ ದುವರ್ತನೆ ನೋಡಿದಾಗ ಪುತ್ತೂರನ್ನು ಗೂಂಡಾರಾಜ್ಯವನ್ನಾಗಿ ಮಾಡಲು ಹೊರಟಂತೆ ಕಾಣುತ್ತಿದೆ. ಇದಕ್ಕೆಲ್ಲದಕ್ಕೂ ಬಿಜೆಪಿ ಯಾವ ರೀತಿ ಹೋರಾಟ ಮಾಡಬೇಕೋ ಅದನ್ನು ಮಾಡಲಿದೆ ಎಂದರು.

ಬಡಗನ್ನೂರು ಗ್ರಾ.ಪಂ ಸದಸ್ಯ ಸಂತೋಷ್ ಮಾತನಾಡಿ, ಶಾಲೆಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಮಂತ್ರಣ ಪತ್ರಿಕೆಯಲ್ಲಿ ಯಾವ ಗಣ್ಯರ ಹೆಸರನ್ನು ಹಾಕಿಲ್ಲ. ಅಲ್ಲಿ ಯಾರು ಬಂದಿದ್ದಾರೋ ಅವರಲ್ಲೇ ಕಾರ್ಯಕ್ರಮ ಉದ್ಘಾಟಿಸಲಾಯಿತು. ಮೊನ್ನೆ ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಕಿಯ ವಿರುದ್ಧ ಶಾಸಕರು ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಆದರೆ ಅಲ್ಲಿನ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕರ ಬಗ್ಗೆ ಯಾರೂ ಮಾತಾಡಿಲ್ಲ. ಯಾಕೆಂದರೆ ಪಂಚಾಯತ್ ಅಧ್ಯಕ್ಷರು ಮತ್ತು ನಾನು ವೇದಿಕೆಯಲ್ಲಿ ಇದ್ದೆವು. ಆದರೆ ಶಾಸಕರು ಯಾವ ವಿಡಿಯೋ ಆಧಾರಿಸಿ ಆ ಮಾತನ್ನು ಆಡಿದ್ದಾರೆ ಎಂಬುದು ಗೊತ್ತಿಲ್ಲ. ಶಾಸಕರಿಗೆ ಅವಮಾನ ಆಗಿದ್ದರೆ ಅದು ನಮಗೂ ಅವಮಾನ. ಆದರೆ ಅಲ್ಲಿ ಅಂತಹ ಘಟನೆಯೇ ನಡೆದಿಲ್ಲ. ನಡೆಯದ ಘಟನೆಯನ್ನು ಆಗಿದೆ ಎಂಬಂತೆ ಬಿಂಬಿಸಿರುವುದು ಬೇಸರದ ವಿಚಾರ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ, ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಪ್ರಮುಖರಾದ ಹರಿಪ್ರಸಾದ್ ಯಾದವ್, ನಿತೀಶ್ ಕುಮಾರ್ ಶಾಂತಿವನ, ವಿದ್ಯಾಧರ್ ಜೈನ್ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ರಾಜ್ಯದ ಅತೀ ದೀರ್ಘಾವಧಿಯ ಮುಖ್ಯಮಂತ್ರಿ: ನಾಟಿಕೋಳಿ ಔತಣಕೂಟ ನೀಡಿ ಸಂಭ್ರಮಿಸಲಿದ್ದಾರೆ ಸಿಎಂ ಸಿದ್ದರಾಮಯ್ಯ!

ಬೆಂಗಳೂರು: ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ…