Gl jewellers
ರಾಜಕೀಯ

ಪುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಮಳ ರಾಮಚಂದ್ರ |  ಅಂದಿನ ತನ್ನ ಪ್ರತಿಸ್ಪರ್ಧಿ, ಇಂದು ಪುಡಾ ಅಧ್ಯಕ್ಷ: ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಆಳ್ವ

ಪುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಳ ರಾಮಚಂದ್ರ ಅವರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನಾ ಸಭೆ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಪುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಮಳ ರಾಮಚಂದ್ರ ಅವರಿಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಅಭಿನಂದನಾ ಸಭೆ ನಡೆಯಿತು.

Papemajalu garady
Karnapady garady

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಮಾತನಾಡಿ, ಒಂದೊಮ್ಮೆ ತನ್ನ ಪ್ರತಿಸ್ಪರ್ಧಿ ಆಗಿದ್ದ ಅಮಳ ರಾಮಚಂದ್ರ ಅವರು ಇಂದು ಪುಡಾ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅವರು ಒಂದೊಮ್ಮೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾದಿಯ ಪ್ರಬಲ ಪ್ರತಿಸ್ಪರ್ಧಿ ಆಗಿದ್ದರು. ಬ್ಲಾಕ್ ಅಧ್ಯಕ್ಷತೆಯನ್ನು ತನಗೆ ನೀಡುವಂತೆ ಶಾಸಕ ಅಶೋಕ್ ಕುಮಾರ್ ರೈ ಅವರ ಜೊತೆ ಮಾತನಾಡುವಾಗ, ಅಮಳರು ಇದ್ದಾರೆ ಎಂದು ಹಲವು ಬಾರಿ ಹೇಳಿದ್ದರು. ಇದೀಗ ಅವರು ಪುಡಾ ಅಧ್ಯಕ್ಷರಾಗಿ ಅಧಿಕಾರ ಪಡೆದುಕೊಂಡಿರುವುದು ಸಂತೋಷದ ವಿಚಾರ ಎಂದರು.

ಅಭಿನಂದನಾ ಭಾಷಣ ಮಾಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಶ್ಯಾಮ್ ಸುಂದರ್ ರೈ ಮಾತನಾಡಿ, ಕಾಲಘಟ್ಟದ ಬದಲಾವಣೆಗೆ ನಾವು ಹೊಂದಿಕೊಳ್ಳಬೇಕು. ಅದರಂತೆ ಅಮಳರು ಕಾಂಗ್ರೆಸ್ ಗೆ ಬಂದರು. ಇಲ್ಲಿ ಬಂದಿಯೂ ತನ್ನ ಕ್ರಿಯಾಶೀಲ ವ್ಯಕ್ತಿತ್ವವನ್ನು ವ್ಯಕ್ತಪಡಿಸಿದ್ದಾರೆ. ಟೀಕೆ – ಟಿಪ್ಪಣಿಗಳನ್ನು ಸಮರ್ಥವಾಗಿ ಎದುರಿಸಿದ್ದಾರೆ. ಶೈಕ್ಷಣಿಕವಾಗಿ ಕೊಳ್ತಿಗೆ ಶಾಲಾ ಎಸ್.ಡಿ.ಎಂ.ಸಿ. ಚುಕ್ಕಾಣಿ ಹಿಡಿದು ಬಹಳ ಬದಲಾವಣೆ ತಂದಿದ್ದಾರೆ. ಧಾರ್ಮಿಕವಾಗಿಯೂ ಬಹಳಷ್ಟು ಕೆಲಸ ನಿರ್ವಹಿಸಿದ್ದಾರೆ. ತಮಗೆ ಸಿಕ್ಕ ಎಲ್ಲ ಅವಕಾಶವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಆದ್ದರಿಂದ ಅಮಳ ರಾಮಚಂದ್ರ ಅವರ ಆಯ್ಕೆಯ ಮೂಲಕ ಪುಡಾಕ್ಕೆ ಉತ್ತಮ ಅಭ್ಯರ್ಥಿಯ ಆಯ್ಕೆ ಆಗಿದೆ. ಅವರು ಶಾಸಕರ ಇಂಗಿತವಾಗಿರುವ ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ನೂರಕ್ಕೆ ನೂರು ಸತ್ಯ. ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳುವಾಗ ಪಕ್ಷವನ್ನು ನೋಡದೇ, ಜನರಿಗಾಗಿ ದುಡಿತಾರೆ ಎಂದರು.

ಪುಡಾ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಮಹಿಳಾ ಘಟಕ ಅಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿಸೋಜಾ, ಚಂದ್ರಹಾಸ ಬೋಳೋಡಿ ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ ಗೌಡ ಕಾರ್ಯಕ್ರಮ ನಿರೂಪಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ

Related Posts

ಅರವಿಂದ್ ಕೇಜ್ರಿವಾಲ್ ಹೊಸ ರಾಜಕೀಯ ಇನ್ನಿಂಗ್ಸ್ ಶುರು? ರಾಜ್ಯಸಭೆ ಎಂಟ್ರಿಗೆ ಹೊಸ ದಾಳ ಉರುಳಿಸಿದ ಮಾಜಿ ಸಿಎಂ!

ಇತ್ತೀಚಿನ ದೆಹಲಿ ವಿಧಾನಸಭಾ ಚುನಾವಣೆ ಸೋಲಿನ ಬೆನ್ನಲ್ಲೇ ಆಮ್‌ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ…

ವ್ಹೀಲ್ ಚೇರಿನಲ್ಲಿ ವಿಧಾನಸಭೆ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ! ಅಷ್ಟಕ್ಕೂ ಸಿಎಂಗೇನಾಯ್ತು?

ಇಂದಿನಿಂದ ವಿಧಾನಸಭೆ ಅಧಿವೇಶನ. ಈ ಅಧಿವೇಶನಕ್ಕೆ ಸಿಎಂ ಸಿದ್ದರಾಮಯ್ಯ ಅವರು ವ್ಹೀಟ್‌ ಚೇರಿನಲ್ಲಿ…