Gl
ದೇಶ

ಸ್ಟೇಡಿಯಂ ಗ್ಯಾಲರಿಯಿಂದ ಬಿದ್ದ ಶಾಸಕಿಯ ಸ್ಥಿತಿ ಗಂಭೀರ!!

ಕಾಂಗ್ರೆಸ್‌ ಶಾಸಕಿ ಉಮಾ ಥಾಮಸ್ ಭಾನುವಾರ ಜೆಎಲ್‌ಎನ್ ಸ್ಟೇಡಿಯಂ ಗ್ಯಾಲರಿಯಿಂದ ಕೆಳಗೆ ಬಿದ್ದಿದ್ದಾರೆ.

ಈ ಸುದ್ದಿಯನ್ನು ಶೇರ್ ಮಾಡಿ

ಕೊಚ್ಚಿ: ಕಾಂಗ್ರೆಸ್‌ ಶಾಸಕಿ ಉಮಾ ಥಾಮಸ್ ಭಾನುವಾರ ಜೆಎಲ್‌ಎನ್ ಸ್ಟೇಡಿಯಂ ಗ್ಯಾಲರಿಯಿಂದ ಕೆಳಗೆ ಬಿದ್ದಿದ್ದಾರೆ.

rachana_rai
Pashupathi
akshaya college

ತಲೆ ಮತ್ತು ಬೆನ್ನುಮೂಳೆಗೆ ಗಾಯಗಳಾಗಿದ್ದು, ವೆಂಟಿಲೇಟರ್ ಬೆಂಬಲದೊಂದಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನಡೆಯುತ್ತಿದೆ.

pashupathi

ತೃಕ್ಕಾಕರ ಶಾಸಕಿ ಉಮಾ ಥಾಮಸ್ ಅವರು ನೃತ್ಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಜವಾಹರಲಾಲ್ ನೆಹರು ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಈ ವೇಳೆ ಆಯತಪ್ಪಿ ಸುಮಾರು 15 ಅಡಿ ಎತ್ತರದ ಸ್ಟೇಡಿಯಂನ ವಿಐಪಿ ಗ್ಯಾಲರಿಯಿಂದ ಬಿದ್ದಿದ್ದಾರೆ.

ಎತ್ತರದಿಂದ ಬಿದ್ದ ಶಾಸಕಿ ಉಮಾ ಥಾಮಸ್ ಅವರನ್ನು ಸ್ವಯಂಸೇವಕರು ಕ್ರೀಡಾಂಗಣದ ಬಳಿಯ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ಪ್ರಕಾರ, ತಲೆ ಮತ್ತು ಬೆನ್ನುಹುರಿಯ ಮೇಲೆ ಗಾಯಗಳು ಕಂಡುಬಂದಿವೆ. ಮುಖ ಮತ್ತು ಪಕ್ಕೆಲುಬುಗಳ ಮೇಲೆ ಉಂಟಾದ ಮುರಿತಗಳ ಕಾರಣದಿಂದಾಗಿ, ಶ್ವಾಸಕೋಶದಲ್ಲಿ ಆಂತರಿಕ ರಕ್ತಸ್ರಾವವಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಕೊನೆಕ್ಷಣದಲ್ಲಿ ಏರ್ ಇಂಡಿಯಾ ಹಾರಾಟ ರದ್ದು: ಮಂಗಳವಾರ ಒಂದೇ ದಿನ 7 ಪ್ರಕರಣ!! ಏರ್ ಇಂಡಿಯಾ ವಿಮಾನದಲ್ಲಿ ಹೆಚ್ಚುತ್ತಿದೆಯೇ ತಾಂತ್ರಿಕ ದೋಷ?

ಕೊನೆ ಕ್ಷಣದಲ್ಲಿ ವಿಮಾನ ಹಾರಾಟ ರದ್ದು ಆಗುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ಮಂಗಳವಾರ ಒಂದೇ…