ವಿದೇಶ

ಆಶಾ ಭೋಸ್ಲೆ ಹಾಡು ಪ್ರಸಾರ ಮಾಡಿದ ಪಾಕ್ ಟಿವಿಗೆ ನೊಟೀಸ್!!

GL

ಈ ಸುದ್ದಿಯನ್ನು ಶೇರ್ ಮಾಡಿ

ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ನಿಧನರಾದಾಗ ನೆರೆಯ ಪಾಕಿಸ್ತಾನದಲ್ಲಿ ಆಶಾ ಭೊಸ್ಲೆ ಗೌರವಾರ್ಥ ಅವರ ಹಾಡುಗಳನ್ನು ಚಾನೆಲ್ ಒಂದು ಪ್ರಸಾರ ಮಾಡಿತ್ತು. ಆದರೆ ಈಗ ಪಾಕ್ ಸರ್ಕಾರ ಆ ಚಾನೆಲ್​​ಗೆ ನೊಟೀಸ್ ನೀಡಿದೆ.

chennai-shopping
maithri

ಭಾರತದ ಖ್ಯಾತ ಗಾಯಕಿ ಆಶಾ ಭೋಂಸ್ಲೆ ಅವರು ಕಳೆದ ಭಾನುವಾರ ನಿಧನರಾದಾಗ, ಅವರಿಗೆ ಗೌರವ ನಮನ ಸಲ್ಲಿಸಿ ಆಶಾ ಭೋಸ್ಲೆ ಅವರ ಜನಪ್ರಿಯ ಹಾಡುಗಳನ್ನು ಪಾಕಿಸ್ತಾನದ ‘ಜಿಯೋ ನ್ಯೂಸ್’ (Geo News) ಚಾನೆಲ್‌ ಪ್ರಸಾರ ಮಾಡಿತ್ತು, ಆಶಾ ಭೊಸ್ಲೆ ಅವರಿಗೆ ಗೌರವ ಸಹ ಸಲ್ಲಿಸಲಾಗಿತ್ತು. ಇದೀಗ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮೀಡಿಯಾ ರೆಗ್ಯುಲೇಟರಿ ಅಥಾರಿಟಿ (PEMRA) ಜಿಯೋ ನ್ಯೂಸ್​​ಗೆ ನೋಟಿಸ್ ನೀಡಿದೆ. ಆಶಾ ಭೋಂಸ್ಲೆ ಅವರ ನಿಧನದ ಸುದ್ದಿಯೊಂದಿಗೆ ‘ಭಾರತೀಯ ಕಂಟೆಂಟ್’ ಪ್ರಸಾರ ಮಾಡಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದ್ದು, ವಿವರಣೆ ಕೇಳಲಾಗಿದೆ.

ಜಿಯೋ ನ್ಯೂಸ್‌ನ ಎಂಡಿ ಅಜರ್ ಅಬ್ಬಾಸ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ‘ದಿಗ್ಗಜ ಕಲಾವಿದರು ನಿಧನರಾದಾಗ ಅವರ ಸಾಧನೆಯನ್ನು ಸ್ಮರಿಸುವುದು ಸಂಪ್ರದಾಯ. ಆಶಾ ಭೋಸ್ಲೆ ಅವರಂತಹ ಮಹಾನ್ ಗಾಯಕಿ ಪಾಕಿಸ್ತಾನದ ಖ್ಯಾತ ಗಾಯಕಿ ನೂರ್ ಜಹಾನ್ ಅವರನ್ನು ‘ಅಕ್ಕ’ ಎಂದು ಕರೆಯುತ್ತಿದ್ದರು ಮತ್ತು ನುಸ್ರತ್ ಫತೇ ಅಲಿ ಖಾನ್ ಅವರೊಂದಿಗೆ ಕೆಲಸ ಮಾಡಿದ್ದರು. ಯುದ್ಧದ ಸಮಯದಲ್ಲಿ ಕಲೆ ಮತ್ತು ಕಲಾವಿದರು ಬಲಿಯಾಗಬಾರದು’ ಎಂದು ಅವರು ಟ್ವಿಟ್ಟರ್​​ನಲ್ಲಿ ನಲ್ಲಿ ಬರೆದುಕೊಂಡಿದ್ದಾರೆ. ಅಜರ್ ಅಬ್ಬಾಸ್ ಅವರ ಟ್ವೀಟ್​​ಗೆ ಸಾಕಷ್ಟು ಬೆಂಬಲ ಸಹ ವ್ಯಕ್ತವಾಗಿದೆ.

ಭಾರತೀಯ ಮಾಧ್ಯಮಗಳ ಮೇಲೆ ಪಾಕಿಸ್ತಾನವು 2018 ರಿಂದಲೇ ನಿಷೇಧ ಹೇರಿದೆ. ಆದಾಗ್ಯೂ, ಅಲ್ಲಿ ಭಾರತೀಯ ಚಲನಚಿತ್ರಗಳು ಮತ್ತು ಹಾಡುಗಳು ಟ್ರೆಂಡ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ತೆರೆಕಂಡ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಪಾಕಿಸ್ತಾನದಲ್ಲಿ ದೊಡ್ಡ ಅಲೆ ಎಬ್ಬಿಸಿವೆ. ಜನ ಪೈರಸಿ ಸಿಡಿಗಳನ್ನು ಖರೀದಿಸಿ ಸಿನಿಮಾ ನೋಡಿದ್ದಾರೆ. ಪಾಕ್ ನೆಟ್​​ಫ್ಲಿಕ್ಸ್​​ನಲ್ಲಿಯೂ ಸಹ ‘ಧುರಂಧರ್’ ಸಿನಿಮಾ ಟಾಪ್ ಟ್ರೆಂಡಿಂಗ್​​ನಲ್ಲಿತ್ತು. ಪಾಕಿಸ್ತಾನದ ಸ್ಪಾಟಿಫೈ (ಆನ್​ಲೈನ್ ಹಾಡುಗಳ ಆಪ್) ಇತರೆ ಆನ್​​ಲೈನ್ ವೇದಿಕೆಗಳಲ್ಲಿ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾದ ಹಾಡುಗಳೇ ಟ್ರೆಂಡಿಂಗ್​​ನಲ್ಲಿವೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…

ಭೀಕರ ಪರಿಸರ ದುರಂತಕ್ಕೆ ನಾಂದಿ ಹಾಡಲಿದೆ ಇರಾನ್ – ಇಸ್ರೇಲ್ ಯುದ್ಧ! ಭಾರತಕ್ಕೂ ಭೀಕರ ಆರೋಗ್ಯ ಸಮಸ್ಯೆ ತಟ್ಟುವ ಭೀತಿ?

ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಇದೀಗ ಭೀಕರ ಪರಿಸರ ದುರಂತಕ್ಕೆ ಹೇತುವಾಗಿದೆ…