ವಿದೇಶ

ಚೀನಾದ ಗಿಡುಗ ಖ್ಯಾತಿಯ ಸನೆ ತಾಕೈಚಿ ಜಪಾನ್ ಪ್ರಧಾನಿ! ಜಪಾನಿನ ಮೊದಲ ಮಹಿಳಾ ಪ್ರಧಾನಿಗೆ ಮೋದಿ ಶುಭಾಶಯ

GL

ಈ ಸುದ್ದಿಯನ್ನು ಶೇರ್ ಮಾಡಿ

ಟೋಕಿಯೊ: ಇತಿಹಾಸದಲ್ಲೇ ಜಪಾನ್‌ನಲ್ಲಿ ಮೊದಲ ಬಾರಿ ಮಹಿಳೆಯೊಬ್ಬರು ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ. ಬಲಪಂಥೀಯ ನಾಯಕಿ ಸನೆ ತಾಕೈಚಿ ಜಪಾನಿನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

chennai-shopping
maithri

ಆಡಳಿತರೂಢ ಲಿಬರಲ್‌ ಡೆಮಾಕ್ರಟಿಕ್‌ ಪಕ್ಷದ ಕಟ್ಟಾ ಸಂಪ್ರದಾಯವಾದಿಯಾಗಿರುವ 64 ವರ್ಷದ ಸನೆ ತಾಕೈಚಿ ಅವರನ್ನು ಪ್ರಧಾನಿಯನ್ನಾಗಿ ಸಂಸತ್ತು ಆಯ್ಕೆ ಮಾಡಿದೆ. ಶಿಂಜೊ ಅಬೆ ಅವರ ಶಿಷ್ಯೆಯಾಗಿದ್ದ ತಕೈಚಿ, ಅಬೆ ಅವರ ಪ್ರಧಾನಿ ಅವಧಿಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್‌ 4ರಂದು ನಡೆದ ಪಕ್ಷದ ಆಂತರಿಕ ಚುನಾವಣೆಯಲ್ಲಿ ಸನೆ ತಾಕೈಚಿ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ದೇಶದ ಜನಪ್ರಿಯ ಮಾಜಿ ಪ್ರಧಾನಿ ಜುನಿಚಿರೊ ಕೊಯ್ಚುಮಿ ಅವರ ಪುತ್ರ ಹಾಗೂ ಕೃಷಿ ಸಚಿವ ಶಿಂಜಿರೊ ಕೊಯ್ಚುಮಿ ಅವರನ್ನು ಸನೆ ಸೋಲಿಸಿದ್ದರು.

ಜಪಾನ್ ಮೊದಲು ವಿದೇಶಾಂಗ ನೀತಿಯನ್ನು ಪ್ರತಿಪಾದಿಸುತ್ತಿರುವ ಇವರು ಅಮೆರಿಕದ ವ್ಯಾಪಾರ ನಿಯಮಗಳನ್ನು ಟೀಕಿಸಿದ್ದರು. ತೈವಾನ್ ಪರ ಒಲವು ಹೊಂದಿರುವ ಇವರು ಚೀನಾದ ಗಿಡುಗ ಎಂದು ಪ್ರಖ್ಯಾತಿ ಪಡೆದಿದ್ದಾರೆ.

ಸನೆ ತಾಕೈಚಿ ಅಯ್ಕೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

“ನನ್ನ ಕುಟುಂಬ ಸರ್ವನಾಶ, ನಾನೂ ಸತ್ತಿದ್ರೆ ಚೆನ್ನಾಗಿತ್ತು, ಯಾರನ್ನು ಬಿಡಲ್ಲ”: ಉಗ್ರ ಮಸೂದ್ ಅಜ್ಹರ್ ಕಣ್ಣೀರು!

ಪಾಕಿಸ್ತಾನದ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್‌ನ ಪ್ರಮುಖ ನೆಲೆ ಮರ್ಕಜ್ ಸುಭಾನ್ ಅಲ್ಲಾ…

ಭೀಕರ ಪರಿಸರ ದುರಂತಕ್ಕೆ ನಾಂದಿ ಹಾಡಲಿದೆ ಇರಾನ್ – ಇಸ್ರೇಲ್ ಯುದ್ಧ! ಭಾರತಕ್ಕೂ ಭೀಕರ ಆರೋಗ್ಯ ಸಮಸ್ಯೆ ತಟ್ಟುವ ಭೀತಿ?

ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವಿನ ಯುದ್ಧ ಇದೀಗ ಭೀಕರ ಪರಿಸರ ದುರಂತಕ್ಕೆ ಹೇತುವಾಗಿದೆ…