ಪುತ್ತೂರು: ದರ್ಬೆ ಸುಗಮ ಸ್ಟೋರ್ ಪಕ್ಕದಲ್ಲಿ ಪಿ.ಎಸ್. ಭಟ್ಸ್ ಕಿಚನ್ ಶುಕ್ರವಾರ ಬೆಳಿಗ್ಗೆ ಶುಭಾರಂಭಗೊಂಡಿತು.
ಶುದ್ಧ ಸಸ್ಯಾಹಾರಿ, ,ಮನೆಯ ಸವಿ, ಸಾದಾ ಆಹಾರ, ನಿತ್ಯ ತಾಜಾ ಧ್ಯೇಯದೊಂದಿಗೆ ಗಂಜಿ ಊಟ, ಚಾ, ಕಾಫಿ, ತಿಂಡಿಗಳ ಸ್ವಾದವನ್ನು ನೀವಿಲ್ಲಿ ಸವಿಯಬಹುದು.
ಕೊಡಿಪ್ಪಾಡಿ ದೇವಸ್ಥಾನದ ಪ್ರಧಾನ ಅರ್ಚಕ ಮುರಳೀಧರ ಬಡೆಕ್ಕಿಲ್ಲಾಯ ಅವರು ಗಣಪತಿ ಹೋಮ ಹಾಗೂ ಲಕ್ಷ್ಮೀ ಪೂಜೆ ನೆರವೇರಿಸಿದರು.
ಬಳಿಕ ಮಾಲಕ ಸಂದೇಶ್ ಅವರ ತಂದೆ ಸದಾಶಿವ ಭಟ್ ಹಾಗೂ ತಾಯಿ ಗೀತಾ ಅವರು ದೀಪ ಬೆಳಗಿ, ಸಂಸ್ಥೆಗೆ ಶುಭಹಾರೈಸಿದರು.
ಕಟ್ಟಡದ ಮಾಲಕರೂ ಆಗಿರುವ ಸುಗಮ ಸ್ಟೋರ್ಸ್’ನ ಗೋಪಾಲಕೃಷ್ಣ ಭಟ್, ಮನೆಯವರು, ಬಂಧು ಮಿತ್ರರು, ಹಿತೈಷಿಗಳು ಉಪಸ್ಥಿತರಿದ್ದರು.
ಪಿಎಸ್ ಭಟ್ಸ್ ಕಿಚನ್ ವಿಶೇಷ:
ಪಲ್ಯ, ಚಟ್ನಿ, ಮಜ್ಜಿಗೆ, ಉಪ್ಪಿನಕಾಯಿಯೊಂದಿಗೆ ಗಂಜಿ ಊಟ. ಇದು ಪಿ.ಎಸ್. ಭಟ್ಸ್’ನ ವಿಶೇಷ. ಇದರೊಂದಿಗೆ ಬೆಳಿಗ್ಗೆ ಚಾ, ಕಾಫಿ, ತಿಂಡಿ ಹಾಗೂ ಸಂಜೆ ಬಿಸಿ ದೋಸೆ ಹಾಗೂ ಎಣ್ಣೆ ತಿಂಡಿಗಳು ಸಿಗುತ್ತವೆ. ದಿನಕ್ಕೊಂದು ರೀತಿಯ ವೆರೈಟಿ ತಿಂಡಿ ನೀಡಬೇಕೆನ್ನುವುದು ಮಾಲಕರ ಆಶಯ.
ಕ್ಯಾಟರಿಂಗ್ ಕೂಡ ಲಭ್ಯ:
ಪಿ.ಎಸ್. ಭಟ್ ಕಿಚನ್ ಆರಂಭವಾದದ್ದು ಕೊರೋನಾ ಸಂದರ್ಭ. ಮನೆಮನೆಗಳಿಗೆ ತಿಂಡಿ ನೀಡುತ್ತಾ ಗ್ರಾಹಕ ಸಂತೃಪ್ತಿಯನ್ನು ಗಳಿಸಿತು. ಬಳಿಕ ಹೋಂ ಪ್ರಾಡಕ್ಟ್ ಕ್ಯಾಟರಿಂಗ್ ಆರಂಭಿಸುವ ಮೂಲಕ ಸಂಸ್ಥೆ ಮೇಲ್ದರ್ಜೆಗೇರಿತು. ಇದೀಗ ದರ್ಬೆಯಲ್ಲಿ ಪಿ.ಎಸ್. ಭಟ್ಸ್ ಕಿಚನ್ ಶುಭಾರಂಭಗೊಳ್ಳುವ ಮೂಲಕ ಸಾಂಸ್ಥಿಕ ರೂಪ ಪಡೆದುಕೊಂಡಿದೆ. ಇದರೊಂದಿಗೆ ಶುಭ ಸಮಾರಂಭಗಳಿಗೆ ಕ್ಯಾಟರಿಂಗ್ ಸರ್ವೀಸ್ ಕೂಡ ಲಭ್ಯ. ಬಾಳೆಕಾಯಿ ಶರ್ಕರ ವೆರಟ್ಟಿ (ಬೆಲ್ಲದ), ಸಕ್ಕರೆ, ಬೆಲ್ಲ ರಹಿತ ತಿನಿಸುಗಳು ಲಭ್ಯ ಎನ್ನುತ್ತಾರೆ ಮಾಲಕ ಸಂದೇಶ್.



























