ಪುತ್ತೂರು: ಹೈಕೋರ್ಟ್ ವಕೀಲ, ಪುತ್ತೂರಿನ ಪಾಣಾಜೆ ಗ್ರಾಮದ ಸೂರಂಬೈಲಿನ ಎಸ್. ರಾಜಾರಾಮ್ ಅವರು ಕರ್ನಾಟಕ ಹೈಕೋರ್ಟ್’ನ ಜಾರಿ ನಿರ್ದೇಶನಾಲಯ (ಇ.ಡಿ.) ಪರ ವಕೀಲರಾಗಿ ನೇಮಕಗೊಂಡಿದ್ದಾರೆ.
ಕೇಂದ್ರ ಸರಕಾರ ಈ ನೇಮಕಾತಿ ಆದೇಶ ಹೊರಡಿಸಿದೆ.
ವಿವೇಕಾನಂದ ಕಾನೂನು ವಿದ್ಯಾಲಯದಲ್ಲಿ ಹಾಗೂ ಎಸ್.ಡಿ.ಎಂ. ಕಾನೂನು ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಬೆಂಗಳೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು, ಹೈಕೋರ್ಟ್’ನಲ್ಲಿ ಕ್ರಿಮಿನಲ್ ಹಾಗೂ ನಿರೀಕ್ಷಣಾ ಜಾಮೀನು ವಿಷಯದಲ್ಲಿ ಹೆಚ್ಚಿನ ಪರಿಣತಿ ಪಡೆದಿದ್ದಾರೆ.
ಪೆರ್ಲ ಸತ್ಯನಾರಾಯಣ ಹೈಸ್ಕೂಲ್’ಲ್ಲಿ ಶಿಕ್ಷಕರಾಗಿದ್ದ ದಿ. ನರಸಿಂಹ ಭಟ್ ಹಾಗೂ ಮನೋರಮಾ ಅವರ ಪುತ್ರ. ಪ್ರಸ್ತುತ ಎಸ್. ರಾಜಾರಾಮ್ ಅವರು ಪತ್ನಿ ಶ್ರೀವಿದ್ಯಾ ರಾಜಾರಾಮ್ ಹಾಗೂ ಇಬ್ಬರು ಪುತ್ರಿಯರ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.