pashupathi
ಉದ್ಯೋಗ

ಇಂದು (ಅ.2) ತೆಂಕಿಲದಲ್ಲಿ ಸಪ್ತಗಿರಿ ಗ್ರೂಪ್ಸ್’ನ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೈಪಾಸ್ ಹೆದ್ದಾರಿಯ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಸಪ್ತಗಿರಿ ಗ್ರೂಪ್ಸ್ ನೂತನವಾಗಿ ನಿರ್ಮಿಸಿರುವ ‘ಪುಷ್ಪಾ ಸ್ಟೇರ್’ ವಾಣಿಜ್ಯ ಸಂಕೀರ್ಣ ಅ. 2ರಂದು ಸಂಜೆ 6 ಗಂಟೆಗೆ ಲೋಕಾರ್ಪಣೆಗೊಳ್ಳಲಿದೆ.

akshaya college

ಪ್ರಗತಿಪರ ಕೃಷಿಕರೂ ಆಗಿರುವ ಕಟ್ಟಡ ಮಾಲಕರ ತಂದೆ ಸುಬ್ರಾಯ ನ್ಯಾಕ್ ಕೊಳಕೆಮಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದು, ಮಂಗಳೂರಿನ ಶಕ್ತಿ ಸಮೂಹ ಸಂಸ್ಥೆಯ ಡಾ.ಕೆ.ಸಿ. ನ್ಯಾಕ್ ಅವರು ಉದ್ಘಾಟಿಸಲಿದ್ದಾರೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ ಕುಮಾರ್ ರೈ, ಎಂ.ಎಲ್.ಸಿ. ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ದ್ವಾರಕ ಕಾರ್ಪೋರೇಶನ್’ನ ಗೋಪಾಲಕೃಷ್ಣ ಭಟ್, ಸಚಿನ್ ಟ್ರೇಡಿಂಗ್’ನ ಮಾಲಕ ಮಂಜುನಾಥ ನಾಯಕ್ ಕಲ್ಲಾರೆ, ಯುಆರ್ ಪ್ರಾಪರ್ಟಿಸ್’ನ ಉಜ್ವಲ್ ಪ್ರಭು, ವಿಜಯ ಸಾಮ್ರಾಟ್ ಸಂಸ್ಥಾಪಕ ಸಹಜ ರೈ ಬಳಜ್ಜ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಳಿಯ ಜ್ಯುವೆಲ್ಲರ್ಸನ ಮುಳಿಯ ಕೇಶವ ಭಟ್, ಎಸ್.ಡಿ.ಪಿ. ರೆಮಿಡೀಸಿನ ಡಾ. ಹರಿಕೃಷ್ಣ ಪಾಣಾಜೆ, ಸಾಮೆತ್ತಡ್ಕ ಸಿಝರ್ ಗ್ರೂಪ್ಸ್’ನ ಪ್ರಸನ್ನ ಕುಮಾರ್ ಶೆಟ್ಟಿ, ತುಳಸಿ ಕ್ಯಾಟರರ್ಸ್’ನ ಹರೀಶ್ ರಾವ್ ಹಾಗೂ ರೋಟರಿ ಕ್ಲಬ್ ಪುತ್ತೂರು ಯುವದ ಅಧ್ಯಕ್ಷ ಕುಸುಮ್ ರಾಜ್ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪಾಲುದಾರರಾದ ಅಭಿಜಿತ್ ಕೊಳಕೆಮಾರ್, ಅಭೀಷ್ ಕೊಳಕೆಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಷ್ಪಾ ಸ್ಕ್ವೇರ್:

ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಪುಷ್ಪಾ ಸ್ಕ್ವೇರ್ ವಾಣಿಜ್ಯ ಸಂಕೀರ್ಣವು 8 ಸಾವಿರ ಚದರ ಅಡಿ ವಿಸ್ತೀರ್ಣ ಹೊಂದಿದೆ. ಅಂಡರ್‌ ಗ್ರೌಂಡ್, ಗೌಂಡ್‌ಫ್ಲೋ‌ರ್, ಮೊದಲ ಮಹಡಿ ಹಾಗೂ ಎರಡನೇ ಮಹಡಿ ಹೊಂದಿದ್ದು, ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಏಕಕಾಲದಲ್ಲಿ 25 ವಾಹನಗಳನ್ನು ಪಾರ್ಕ್ ಮಾಡಬಹುದಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts