ಶಿಕ್ಷಣ

BA, BSc ವಿದ್ಯಾರ್ಥಿಗಳಿಗೆ ಎಇಡಿಪಿ ಅಪ್ರೆಂಟಿಸ್‌ಶಿಪ್ ವಿಸ್ತರಣೆ! ಏನಿದು ಎಇಡಿಪಿ ಅಪ್ರೆಂಟಿಸ್‌ಶಿಪ್

GL

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು: ಪದವಿ ಪೂರ್ಣಗೊಳಿಸಿದ ನಂತರವೂ ಉದ್ಯೋಗದ ಕೊರತೆಯನ್ನು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ದೊಡ್ಡ ಮಟ್ಟದ ನೆರವು ನೀಡಲು ಮುಂದಾಗಿದೆ.

chennai-shopping
maithri

ಇದುವರೆಗೆ ಬಿ.ಕಾಂ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದ ಅಪ್ರೆಂಟಿಸ್‌ಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಂ (AEDP) ಅನ್ನು ಇದೀಗ ಬಿ.ಎ ಮತ್ತು ಬಿ.ಎಸ್ಸಿ ವಿದ್ಯಾರ್ಥಿಗಳಿಗೂ ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಉನ್ನತ ಶಿಕ್ಷಣ ಸಚಿವ ಎಮ್.ಸಿ. ಸುಧಾಕರ್ ಈ ಘೋಷಣೆ ಮಾಡಿದರು.

ಏನಿದು AEDP?

ಎಇಡಿಪಿ ಕೋರ್ಸ್‌ನಲ್ಲಿ ಸಾಮಾನ್ಯ ಪದವಿ ಶಿಕ್ಷಣದ ಜೊತೆಗೆ ಕೈಗಾರಿಕಾ ತರಬೇತಿ (ಅಪ್ರೆಂಟಿಸ್‌ಶಿಪ್) ನೀಡಲಾಗುತ್ತದೆ. ವಿದ್ಯಾರ್ಥಿಗಳು ಕೆಲವು ಸೆಮಿಸ್ಟರ್‌ಗಳನ್ನು ಕಾಲೇಜಿನಲ್ಲಿ ಕಲಿತು, ಉಳಿದ ಅವಧಿಯಲ್ಲಿ ನೇರವಾಗಿ ಉದ್ಯಮಗಳಲ್ಲಿ ತರಬೇತಿ ಪಡೆಯುತ್ತಾರೆ. ತರಬೇತಿ ಅವಧಿಯಲ್ಲಿ ಶಿಷ್ಯವೇತನ (ಸ್ಟೈಫಂಡ್) ಸಹ ಲಭ್ಯವಿರುತ್ತದೆ.

ಇನ್ನಷ್ಟು ಕಾಲೇಜುಗಳಿಗೆ ವಿಸ್ತರಣೆ

ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾದ ಈ ಮಾದರಿಯನ್ನು ದೇಶದಾದ್ಯಂತ ಜಾರಿಗೆ ತರಲು University Grants Commission (UGC) ಮುಂದಾಗಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 63 ಹೊಸ ಕಾಲೇಜುಗಳಿಗೂ ಈ ಕೋರ್ಸ್ ವಿಸ್ತರಿಸಲಾಗುವುದು.ಈ ಯೋಜನೆ ವಿದ್ಯಾರ್ಥಿಗಳಿಗೆ ಉದ್ಯೋಗಪರ ಕೌಶಲ್ಯ, ಆತ್ಮವಿಶ್ವಾಸ ಮತ್ತು ಆರ್ಥಿಕ ನೆರವು ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ವಿವೇಕಾನಂದ ಕಾಲೇಜಿನಲ್ಲಿ ಹಂಸಧ್ವನಿ ಕಾರ್ಯಕ್ರಮ | ಸಂಗೀತ ಭಾರತೀಯ ಸಂಸ್ಕೃತಿಯ ಸಂಪತ್ತು: ವಿದ್ವಾನ್ ಕಾಂಚನ ಎ. ಈಶ್ವರ ಭಟ್

ಪುತ್ತೂರು: ಸಂಗೀತವೆಂದರೆ ಒಂದು ಕುಟುಂಬವಿದ್ದಂತೆ.  ಸಂಗೀತ ಹೇಳುವುದು ಹಾಗೂ ಕೇಳುವುದರಲ್ಲಿ…

ಮಕ್ಕಳ ರಕ್ಷಣೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಸರ್ಕಾರ | ಮೊಬೈಲ್ ಬ್ಯಾನ್ ಜೊತೆಗೆ ಹಲವು ಸುಧಾರಣಾ ಕ್ರಮಗಳು!

ಬೆಂಗಳೂರು:ರಾಜ್ಯದಲ್ಲಿ ಮಕ್ಕಳ ಆರೋಗ್ಯ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಮಹತ್ವದ…