ಪುತ್ತೂರು: ಪಿಯು ಶಿಕ್ಷಣದ ಎರಡು ವರ್ಷ ವ್ಯಕ್ತಿಯ ಬದುಕಿನ ಬಹುಮುಖ್ಯ ಭಾಗ. ಈ ಶಿಕ್ಷಣ ಕೇವಲ ಉದ್ಯೋಗದ ದೃಷ್ಟಿಯಿಂದ ಮಾತ್ರವಲ್ಲದೆ ಬದುಕಿನ ಮಾರ್ಗವಾಗಿ ಜೀವನದುದ್ದಕ್ಕೂ ಉಳಿದುಕೊಳ್ಳುತ್ತದೆ. ದೇಶಭಕ್ತಿ, ಸಂಸ್ಕಾರ ಹಾಗೂ ಧರ್ಮ ಶಿಕ್ಷಣದಿಂದ ರಾಷ್ಟ್ರ ಎನ್ನುವ ಬಲವಾದ ವಿಚಾರ ಮನಸ್ಸಿನಲ್ಲಿ ಅಚ್ಚೊತ್ತುವುದಕ್ಕೆ ಸಾಧ್ಯ. ಮೌಲ್ಯಯುತವಾದ ಬದುಕನ್ನು ರೂಪಿಸುವ ಹೊಣೆ ವಿದ್ಯಾರ್ಥಿಗಳದ್ದು ಹಾಗೂ ವಿದ್ಯಾಲಯಗಳದ್ದು ಎಂದು ಹೊಸ ದಿಗಂತ ದಿನಪತ್ರಿಕೆಯ ಕಾರ್ಯನಿರ್ವಹಣಾಧಿಕಾರಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪ್ರಕಾಶ್ ಪಿ.ಎಸ್. ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ದ್ವಿತೀಯ ವರ್ಷದ ಪಿಯು ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ – ಸಮರ್ಪಣಮ್ 2026ರ ಮುಖ್ಯ ಅತಿಥಿಯಾಗಿ ಆಗಮಿಸಿ ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಮಾತನಾಡಿದರು.
ಕುಟುಂಬವು ಸಮಾಜ ಜೀವನದ ಪಂಚಾAಗ. ಹಾಗಾಗಿ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವುದು ಆದ್ಯ ಕರ್ತವ್ಯ. ಅಂತೆಯೇ ಸ್ವದೇಶಿ ಭಾವ ಜಾಗೃತವಾಗಿರುವುದರೊಂದಿಗೆ ಪರಿಸರ ಸಂರಕ್ಷಣೆಯ ಹೊಣೆ ನಮ್ಮದಾಗಿರಬೇಕು. ಆಕಾಶ, ಭೂಮಿ, ನೀರು ಅನ್ನುವುದು ಬ್ರಹ್ಮ ವಿಷ್ಣು ಮಹೇಶ್ವರರು ನೆಲೆಸುವ ತಾಣ ಎಂಬAತೆ ಕಾಳಜಿಯಿಂದ ರಕ್ಷಿಸಬೇಕಿದೆ. ಜಾತಿ ಪದ್ಧತಿಯನ್ನು ಹೊಡೆದೋಡಿಸಿ, ಅಸ್ಪೃಶ್ಯತೆಯನ್ನು ನಿವಾರಿಸಿ ಸಾಮರಸ್ಯದ ಬದುಕನ್ನು ಸ್ಥಾಪಿಸಬೇಕು. ಸ್ವಭಾಷೆ – ಸ್ವದೇಶಿ ಚಿಂತನೆಗಳುಳ್ಳ ಜೀವನ ಶೈಲಿ ನಮ್ಮದಾಗಬೇಕು ಎಂದು ಮಾರ್ಗದರ್ಶನ ನೀಡಿದರು.
ಪ್ರಪಂಚದ ಎಲ್ಲಾ ದೇಶಗಳ ಪೈಕಿ ಜಗತ್ತನ್ನು ಉಳಿಸಿ ಎನ್ನುವ ಸಂದೇಶ ಕೊಡುವ ದೇಶ ಭಾರತ ಮಾತ್ರ. ಹಾಗಾಗಿ ನಾವು ಬೆಳಗುವುದರ ಜೊತೆಗೆ ನಮ್ಮ ಸುತ್ತ ಬೆಳಕು ಕೊಡಬೇಕು. ನಾಗರಿಕ ಶಿಷ್ಟಾಚಾರ ಮೈಗೂಡಿಸಿಕೊಳ್ಳಬೇಕು. ಹಿರಿಯರನ್ನು, ಮಹಿಳೆಯರನ್ನು ಗೌರವಿಸುವ ಸದ್ಭಾವನ್ನು ಬೆಳೆಸಿಕೊಳ್ಳಬೇಕು. ರಾಷ್ಟçದ ಬಗೆಗೆ ಗೌರವದೊಂದಿಗೆ ಬದುಕಬೇಕು. ನಮ್ಮ ಸೈನಿಕರಿಂದ ಪ್ರೇರಣೆ ಪಡೆಯಬೇಕು ಎಂದರಲ್ಲದೆ ದೇಶದ ಪರಿವರ್ತನೆಗೆ ಎಲ್ಲರೂ ಕೈಜೋಡಿಸಬೇಕು ಎಮದು ಕರೆನೀಡಿದರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ಧರ್ಮ, ಆಧ್ಯಾತ್ಮ ಹಾಗೂ ದೇಶಭಕ್ತಿಯ ಪಂಚಾAಗವಿರುವ ಶಿಕ್ಷಣವೇ ನಿಜವಾದ ಶಿಕ್ಷಣ. ನಮ್ಮೊಳಗೆ ಮೂಡುವ ಭಾವನೆಗಳನ್ನು ಗುರುತಿಸಿ ಒಳ್ಳೆಯದನ್ನು ಮಾತ್ರ ಉಳಿಸಿಕೊಂಡು ಕೆಟ್ಟದ್ದನ್ನು ಹೊಡೆದೋಡಿಸಿ ನಮಗೂ ಸಮಾಜಕ್ಕೂ ಹಿತವಾಗುವ ಯೋಚನೆಗಳನ್ನು ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅಂಬಿಕಾದಲ್ಲಿ ಪ್ರತಿದಿನವೂ ತರಗತಿ ಆರಂಭದ ಪೂರ್ವದಲ್ಲಿ ತನ್ನ ಸಂಪತ್ತು, ಜ್ಞಾನ ಎಲ್ಲವನ್ನೂ ಕೊನೆ ಉಸಿರಿನವರೆಗೆ ದೇಶಕ್ಕಾಗಿ ಸಮರ್ಪಿಸುತ್ತೇನೆ ಎಂದು ಪ್ರತಿಯೊಬ್ಬನೂ ಪ್ರಮಾಣ ವಚನ ಸ್ವೀಕರಿಸುತ್ತಾನೆ. ಅರದಂತೆೆ ದೇಶಕ್ಕಾಗಿ ಬದುಕುವ ಹೊಣೆ ಎಲ್ಲರ ಮೇಲಿದೆ ಎಂದರು.
ವಿದ್ಯಾರ್ಥಿಗಳಾದ ಜಶ್ಮಿ, ಶ್ರೀಕೃಷ್ಣ ನಟ್ಟೋಜ, ಶ್ರೀಲಕ್ಷ್ಮಿ, ಚಿನ್ಮಯಿ ಎನ್, ಶಶಾಂಕ್ ವಿ.ಎನ್., ವೈಷ್ಣವಿ, ದೃಷ್ಟಿ ಭಟ್ ಅನಿಸಿಕೆಗಳನ್ನು ಹಂಚಿಕೊAಡರು. ರಾಷ್ಟçಮಟ್ಟ, ರಾಜ್ಯಮಟ್ಟಗಳಲ್ಲಿ ಚಿನ್ನ, ಬೆಳ್ಳಿ, ಕಂಚು ಪದಕಗಳನ್ನು ಬಾಚಿಕೊಂಡು ಪುತ್ತೂರಿಗೆ ಕೀರ್ತಿ ತಂದ ಈಜುಪಟು, ಸಂಸ್ಥೆಯ ವಿದ್ಯಾರ್ಥಿನಿ ಪ್ರತೀಕ್ಷಾ ಶೆಣೈ ಅವರನ್ನು ಹೆತ್ತವರಾದ ನರಸಿಂಹ ಶೆಣೈ ಮತ್ತು ಶ್ರೀಲಕ್ಷ್ಮಿ ದಂಪತಿಗಳ ಜೊತೆಗೆ ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಸದಸ್ಯ ಸುರೇಶ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಕಾಶ್ ಪಿ.ಎಸ್.ಅವರನ್ನು ಗೌರವಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು. ವಿದ್ಯಾರ್ಥಿನಿಯರಾದ ಧೃತಿ, ಈಶಿತಾ, ನಿಧಿ ಪ್ರಾರ್ಥಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ ಪ್ರಸಾದ್ ಡಿ.ಎಸ್. ವಂದಿಸಿದರು. ಉಪನ್ಯಾಸಕ ಸತೀಶ ಇರ್ದೆ ಕಾರ್ಯಕ್ರಮ ನಿರೂಪಿಸಿದರು.























