pashupathi
ಶಿಕ್ಷಣ

ಅಕ್ಷಯ ಕಾಲೇಜಿನಲ್ಲಿ ಡ್ರೇಪಿಂಗ್ ಕಾರ್ಯಾಗಾರ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಸಂಪ್ಯ ಅಕ್ಷಯ ಕಾಲೇಜಿನ ಫ್ಯಾಷನ್ ಡಿಸೈನ್ ವಿಭಾಗ “ಫಸೆರಾ” ಫ್ಯಾಷನ್ ಡಿಸೈನ್ ಅಸೋಸಿಯೇಷನ್ ಮತ್ತು ಐಕ್ಯೂಎಸಿ ಇವುಗಳ ಸಹಯೋಗದಲ್ಲಿ “DRAPOLOGY” – ಡ್ರೇಪಿಂಗ್ ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಕರಾವಳಿ ಕಾಲೇಜು, ಮಂಗಳೂರು ಫ್ಯಾಷನ್ ಡಿಸೈನ್ ವಿಭಾಗದ ಉಪನ್ಯಾಸಕಿ ನಿಖಿತಾ ಕುಮಾರಿ ಅವರು ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ಡ್ರೇಪಿಂಗ್ ತಂತ್ರಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿ, ಬಟ್ಟೆಗಳನ್ನು ಹೇಗೆ ವಿವಿಧ ರೀತಿಯಲ್ಲಿ ಮಡಚಿ, ಹೊಸ ವಿನ್ಯಾಸಗಳನ್ನು ರೂಪಿಸಬಹುದು ಎಂಬುದನ್ನು ತೋರಿಸಿದರು.
ವಿದ್ಯಾರ್ಥಿಗಳು ಸ್ವತಃ ಪಾಲ್ಗೊಂಡು ಅಭ್ಯಾಸ ಮಾಡುವ ಮೂಲಕ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡರು. ಡ್ರೇಪಿಂಗ್ ಎನ್ನುವುದು ಫ್ಯಾಷನ್ ಲೋಕದಲ್ಲಿ ತುಂಬ ಅತಿಮುಖ್ಯವಾದ ವಿಷಯವಾಗಿದು ವಿದ್ಯಾರ್ಥಿಗಳಿಗೆ ಡ್ರೇಪಿಂಗ್ ಕುರಿತು ಆಳವಾದ ತಿಳಿವು ಮತ್ತು ಸ್ವತಃ ಅನುಭವ ದೊರೆತಿದ್ದು, ಅವರ ಭವಿಷ್ಯದ ಫ್ಯಾಷನ್ ವಿನ್ಯಾಸ ಕೌಶಲ್ಯ ಅಭಿವೃದ್ಧಿಗೆ ಇದೊಂದು ಮಹತ್ವದ ಹೆಜ್ಜೆಯಾಯಿತು.
ಕಾರ್ಯಾಗಾರದಲ್ಲಿ ಐಕ್ಯೂಎಸಿ ಸಂಯೋಜಕಿ ರಶ್ಮಿಕೆ ಉಪಸ್ಥಿತರಿದ್ದರು. ಮೋಕ್ಷ ಪ್ರಾರ್ಥಿಸಿ, ಹಲೀಮ ಮುಸ್ಕಾನ ಸ್ವಾಗತಿಸಿ, ವಿಭಾಗ ಮುಖ್ಯಸ್ಥೆ ಅನುಷಾ ಪ್ರವೀಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜೆನಿಫರ್ ಅತಿಥಿಗಳನ್ನು ಪರಿಚಯಿಸಿದರು. ಸ್ಪಂದನ ಕಾರ್ಯಕ್ರಮ ನಿರೂಪಿಸಿದರು.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅಂಬಿಕಾದ ಅಡುಗೆಮನೆಗೆ ಆಧುನಿಕ ಸ್ಪರ್ಶ! ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಬಿಕಾ ಶಿಕ್ಷಣ ಸಂಸ್ಥೆಗಳಿಂದ ಹೈಟೆಕ್ ವ್ಯವಸ್ಥೆ

ಪುತ್ತೂರು: ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ…