ಬೆಂಗಳೂರು: ಯಕ್ಷಗಾನದ ಒಳಗೆ ಸಲಿಂಗ ಕಾಮ ಬೆಳೆಯುತ್ತದೆ, ಸ್ತ್ರೀವೇಶದ ಕಲಾವಿದರು ಅದನ್ನು ನಿರಾಕರಿಸಲಾರರು ಎಂದು ಕನ್ನಡ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿಕೆ ನೀಡಿದ್ದಾರೆ.
ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆ ಹುಟ್ಟಿಸಿದ್ದು, ಯಕ್ಷಗಾನ ಕಲಾವಿದರು ಸೇರಿ ಅಕಾಡೆಮಿ ಸದಸ್ಯರು ಹಾಗೂ ಅಧ್ಯಕ್ಷರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮೊದಲು ಮಾಡಿದ್ದ ಹೇಳಿಕೆಯಂತೆ 6–8 ತಿಂಗಳು ಹೊರಗಡೆ ಜೀವನ ನಡೆಸುವ ಕಲಾವಿದರಿಗೆ ಮೋಹದ ಅಗತ್ಯ ಬರುವುದು ಸಹಜ. ಅನೇಕರು ಇದನ್ನು ಅನುಭವಿಸುತ್ತಾರೆ ಎಂದು ಹೇಳಿದ್ದು, ಯಕ್ಷಗಾನ ಕಲಾವಿದರ ವೈಯಕ್ತಿಕ ಬದುಕಿನ ಬಗ್ಗೆ ತಪ್ಪು ಕಲ್ಪನೆ ಹರಿ ಬಿಟ್ಟುಕೊಂಡಿದ್ದಾರೆ.
ಕ್ಷಮೆ ಕೋರಿದ ಬಿಳಿಮಲೆ:
ಯಕ್ಷಗಾನ ಕಲಾವಿದರಿಗೆ ಅವಮಾನ ಮಾಡುವ ಉದ್ದೇಶ ನನ್ನದಲ್ಲ. ಯಕ್ಷಗಾನ ಹಿಂದೂ ಧರ್ಮದ್ದಲ್ಲ ಎಂದು ಹೇಳಿದ್ದೇನೆ. ಅದು ಕಲೆಯೊಂದರ ರೂಪ. ಕಲಾವಿದರು ಅನುಭವಿಸುವ ನೋವುಗಳನ್ನು ಹೇಳಿದ್ದೇನೆ ಹೊರತು ಅವರ ಮಾನಹಾನಿ ಮಾಡುವ ಉದ್ದೇಶ ನನ್ನದಲ್ಲ. ಆದರೇ ಕಲಾವಿದರಿಗೆ ನೋವಾದರೆ ಕ್ಷಮೆ ಕೇಳುತ್ತೇನೆ. ಹೇಳಿಕೆಯನ್ನು ಹಿಂದಕ್ಕೆ ಪಡೆಯುತ್ತೇನೆ ಎಂದು ಹೇಳಿದ್ದಾರೆ.



























