ಕರಾವಳಿ

ಮಾರ್ಕ್ ಟೆಲಿಕಾಂ ಮಾಲಕ ಶಶಿರಾಜ್ ರೈ ಅವರಿಗೆ ಪ್ರೇರಣಾ ಪ್ರಶಸ್ತಿ ಗೌರವ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜೆಸಿಐ ಇಂಡಿಯಾ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಅತ್ಯುತ್ತಮ ತರಬೇತುದಾರರಿಗೆ ನೀಡುವ ಪ್ರೇರಣಾ ಪ್ರಶಸ್ತಿಯನ್ನು ಪುತ್ತೂರಿನ ಮಾರ್ಕ್ ಟೆಲಿಕಾಂ ಮಾಲಕ ಶಶಿರಾಜ್ ರೈ ಅವರಿಗೆ ನೀಡಿ ಗೌರವಿಸಲಾಯಿತು.

akshaya college

ಕಾರ್ಕಳದ ಹೋಟೆಲ್ ಬಾಲಾಜಿ ಇನ್’ನಲ್ಲಿ ಆ. 24ರಂದು ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಜೆಸಿಐ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ. ಗೌರವಿಸಿದರು.

ಜೆಸಿಐನಲ್ಲಿ ಅತ್ಯುತ್ತಮ ತರಬೇತುದಾರರಾಗಿ ನೂರಾರು ತರಬೇತಿ ನೀಡುತ್ತಾ ಬಂದಿರುವ ಶಶಿರಾಜ್ ರೈ ಅವರ ಸಾಧನೆಯನ್ನು ಗುರುತಿಸಿ, ಜೆಸಿಐ ಪುತ್ತೂರು ಘಟಕದಿಂದ ಪ್ರಶಸ್ತಿಗೆ ಹೆಸರು ಶಿಫಾರಸು ಮಾಡಲಾಗಿತ್ತು.

ಪುತ್ತೂರು ಮುಖ್ಯರಸ್ತೆಯಲ್ಲಿರುವ ಮಾರ್ಕ್ ಟೆಲಿಕಾಂ ಮಾಲಕರಾಗಿರುವ ಇವರು, ಪತ್ನಿ ಸ್ವಾತಿ ಎಸ್. ರೈ, ಮಕ್ಕಳಾದ ಸಹರ್ ಎಸ್. ರೈ ಹಾಗೂ ಸಿಯಾರ ಎಸ್. ರೈ ಅವರೊಂದಿಗೆ ಪುತ್ತೂರಿನಲ್ಲಿ ನೆಲೆಸಿದ್ದಾರೆ. ಇವರು ಜೆಸಿಐ ಪುತ್ತೂರು ಘಟಕದ ಪೂರ್ವಾಧ್ಯಕ್ಷ ಮುಂಡಾಲಗುತ್ತು ಮೋಹನ್ ರೈ ಮತ್ತು ಮುಂಡಾಲಗುತ್ತು ಕೃಷ್ಣಕುಮಾರಿ ಎಂ. ರೈ ದಂಪತಿ ಪುತ್ರ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಎರಡೇ ದಿನದಲ್ಲಿ ಬಯಲಾದ ರಸ್ತೆ ಕಾಮಗಾರಿಯ ಅಸಲಿ ಮುಖ | ಅವೈಜ್ಞಾನಿಕ, ಕಳಪೆ ರಸ್ತೆ ಕಾಮಗಾರಿ ವಿರುದ್ಧ ಪುತ್ತಿಲ ಆಕ್ರೋಶ

ಪುತ್ತೂರು: ಕಾಮಗಾರಿ ನಡೆದ ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡ ಎರಡೇ ದಿನದಲ್ಲಿ ಕಿತ್ತು…

ಆ. 30ರಂದು ದ.ಕ. ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ | ಸಾರ್ವಜನಿಕರಿಗೂ ಜಿಲ್ಲಾಧಿಕಾರಿ ನೀಡಿದ್ದಾರೆ ಸೂಚನೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ…

ಸೆ. 7 – 9: ಯುವಜನರ ನಡಿಗೆ ಉದ್ಯೋಗದ ಕಡೆಗೆ ಡಿವೈಎಫ್ಐನಿಂದ ಯುವಜನ ಜಾಥಾ | ಪುತ್ತೂರು ಸಹಿತ ಜಿಲ್ಲಾದ್ಯಂತ ಸಂಚರಿಸಲಿದೆ ಜಾಥಾ

ಪುತ್ತೂರು: ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಯುವಜನರ ನಡಿಗೆ ಉದ್ಯೋಗದ ಕಡೆಗೆ…