ಕರಾವಳಿ

ಸಹಸ್ರಚಂದ್ರ ದರ್ಶನ ಶಾಂತಿಯ ಅಂಗವಾಗಿ ಶರಸೇತು ಬಂಧ ತಾಳಮದ್ದಳೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವ ಕಾರ್ಯದರ್ಶಿ ರಂಗನಾಥ ರಾವ್ ಅವರ ಸಹಸ್ರಚಂದ್ರ ದರ್ಶನ ಶಾಂತಿ ಅಂಗವಾಗಿ ಬೆಂಗಳೂರು ಅಕ್ಷಯ ನಗರ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಏ. 28ರಂದು ಪುತ್ತೂರು ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಸಂಘದ ವತಿಯಿಂದ ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ‘ಶರಸೇತು ಬಂಧ’ ತಾಳಮದ್ದಳೆ ಜರಗಿತು.

chennai-shopping
maithri

ಹಿಮ್ಮೇಳದಲ್ಲಿ ಭಾಗವತರಾಗಿ ವಿಷ್ಣು ಪ್ರಸಾದ್ ಕಲ್ಲೂರಾಯ ಹಾಗೂ ಚೆಂಡೆ, ಮದ್ದಲೆಗಳಲ್ಲಿ ಅಕ್ಷಯ್ ರಾವ್ ವಿಟ್ಲ ಮತ್ತು ಶಿಖಿನ್ ಶರ್ಮ ಶರವೂರು ಸಹಕರಿಸಿದರು.

ಮುಮ್ಮೇಳದಲ್ಲಿ ಪ್ರೇಮಲತಾ ರಾವ್ (ಶ್ರೀರಾಮ), ಶುಭಾ ಅಡಿಗ (ಹನುಮಂತ), ಕಿಶೋರಿ ದುಗ್ಗಪ್ಪ ನಡುಗಲ್ಲು (ಅರ್ಜುನ), ಶುಭಾ ಗಣೇಶ್ (ವೃದ್ಧ ವಿಪ್ರ) ಸಹಕರಿಸಿದರು.

ಸಂಘದ ನಿರ್ದೇಶಕ ಭಾಸ್ಕರ ಬಾರ್ಯ ಸ್ವಾಗತಿಸಿ, ವಂದಿಸಿದರು. ಪ್ರೇಮಲತಾ ರಂಗನಾಥ ರಾವ್ ದಂಪತಿಗಳು ಹಾಗೂ ಮಕ್ಕಳು ಕಲಾವಿದರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts