ಪುತ್ತೂರು: ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕರಾಗಿದ್ದ, ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮಾಜಿ ಟ್ರಸ್ಟಿ ಬೊಳುವಾರು ಕರ್ಮಲ ನಿವಾಸಿ ಡಾ. ಸಿ. ನಿತ್ಯಾನಂದ ಪೈ (73 ವ.) ಅವರು ಜ. 14ರಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ವೃತ್ತಿಯಲ್ಲಿ ವೈದ್ಯರಾಗಿದ್ದ ಡಾ. ಸಿ. ನಿತ್ಯಾನಂದ ಪೈ ಅವರು ಬೊಳುವಾರಿನಲ್ಲಿ ಕ್ಲಿನಿಕ್ ಹೊಂದಿದ್ದರು. ಬಳಕೆದಾರರ ಹಿತರಕ್ಷಣಾ ವೇದಿಕೆಯ ಮೂಲಕ ಹಲವಾರು ಮಂದಿಗೆ ನ್ಯಾಯದ ನೆರಳು ತೋರಿಸಿದ್ದರು.
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು, ಪುತ್ತೂರು ಜಿಎಸ್‌ಬಿ ಅಭಿವೃದ್ದಿ ಸಭಾದ ಮಾಜಿ ಅಧ್ಯಕ್ಷರಾಗಿ, ಸುದಾನ ಕ್ರೀಡಾ ಕ್ಲಬ್ ಸ್ಥಾಪಕರಾಗಿ ಗುರುತಿಸಿಕೊಂಡಿದ್ದರು.
ಇವರ ಅನೇಕ ಸಾಮಾಜಮುಖಿ ಅಂಕಣ, ಲೇಖನಗಳು ಉದಯವಾಣಿ, ಸುದ್ದಿ ಬಿಡುಗಡೆ ಸಹಿತ ಅನೇಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರು ಉತ್ತಮ ಬ್ಯಾಡ್ಮಿಂಟನ್ ಆಟಗಾರರೂ ಹೌದು.
ಮೃತರು ಪತ್ನಿ ವಾಣಿ, ಪುತ್ರಿ, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.
























