ನಿಧನ

ಬೆಂಗಳೂರು ತುಳುಕೂಟದ ಅಧ್ಯಕ್ಷ ಪುತ್ತೂರಿನ ಕುರಿಯ ಮೂಲದ ಸುಂದರರಾಜ್ ರೈ ನಿಧನ! ಕಾಂತಾರ ಚಾಪ್ಟರ್ 1 ರಿಲೀಸ್ ವೇಳೆ ದೈವದ ಅನುಕರಣೆ ಆಗಬಾರದೆಂದು ಆಗ್ರಹಿಸಿದ್ದ ರೈ

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬೆಂಗಳೂರಿನ ತುಳುಕೂಟ, ಬೆಂಗಳೂರು ಕಂಬಳದ ರೂವಾರಿ ಸುಂದರ್ ರಾಜ್ ರೈ ಅವರು ಹೃದಯಾಘಾತದಿಂದ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಇತಿಹಾಸ ಬರೆದ ಬೆಂಗಳೂರು ಕಂಬಳದ ರೂವಾರಿ, ಬೆಂಗಳೂರು ತುಳುಕೂಟದ ಅಧ್ಯಕ್ಷ  ಸುಂದರರಾಜ್ ರೈ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

akshaya college

ಬೆಂಗಳೂರಿನ ತುಳುಕೂಟದ ಎರಡನೇ ಅವಧಿಯ ಅಧ್ಯಕ್ಷರಾದ ಸುಂದರರಾಜ್ ರೈ ಅವರು, ಬೆಂಗಳೂರಿನಲ್ಲಿ ಕಂಬಳ ಮಾಡಬೇಕೆಂಬ ಪ್ರಯತ್ನದಲ್ಲಿದ್ದರು. ನಂತರ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಬೆಂಗಳೂರು ಕಂಬಳ ಇತಿಹಾಸ ಬರೆಯಿತು.

ಈ ವರ್ಷ ಡಿಸೆಂಬರ್ ನಲ್ಲಿ ಬೆಂಗಳೂರಿನಲ್ಲಿ ತುಳುನಾಡಿನ ಪಿಲಿಗೊಬ್ಬನ್ನು ಅದ್ದೂರಿಯಾಗಿ ಆಯೋಜಿಸುವ ಯೋಜನೆ ಹಾಕಿಕೊಂಡಿದ್ದರು.

ಇತ್ತಿಚೆಗೆ ಇವರು ಕಾಂತಾರ ಸಿನಿಮಾದ ನಂತರ ದೈವಗಳ ಅವಹೇಳನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಕಾರಣ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಸಿನಿಮಾ ಸಂಸ್ಥೆ ಸಿನಿಮಾ ವೀಕ್ಷಕರಲ್ಲಿ ದೈವದ ಅನುಕರಣೆ ಮಾಡಬಾರದು ಎಂದು ವಿನಂತಿಸಿಕೊಂಡಿತು.

ಸುಂದರರಾಜ್ ರೈಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುರಿಯ ಕುಕ್ಕುಂಜೋಡು ಸೇಸಪ್ಪ ರೈಗಳ ಪುತ್ರ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts